Wednesday, February 1, 2023

Latest Posts

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮತ್ತೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೇಲೆಮತ್ತೆ ಕಲ್ಲು ಎಸೆದಿದ್ದಾರೆ.
ಬಿಹಾರದ ಹೌರಾ-ನ್ಯೂ ಜಲ್ಪೈಗುರಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ಮಾಡಲಾಗಿದೆ.
ರೈಲಿನ 6 ನೇ ಕೋಚ್‌ನಲ್ಲಿ ಬರ್ತ್ ನಂ.70 ನಲ್ಲಿ ಕುಳಿತಿದ್ದವರು ದಾಲ್ಖೋಲಾ-ಟೆಲ್ಟಾ ರೈಲು ನಿಲ್ದಾಣವನ್ನು ದಾಟುವಾಗ ಕಲ್ಲು ತೂರಾಟದ ಬಗ್ಗೆ ಆರ್‌ಪಿಎಫ್‌ಗೆ ಮಾಹಿತಿ ನೀಡಿದ್ದಾರೆ.
ಕಲ್ಲು ತೂರಾದಿಂದ ಹೈಸ್ಪೀಡ್ ರೈಲಿನ ಒಂದು ಕೋಚ್‌ನ ಕಿಟಕಿ ಹಲಗೆಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 04.25 ರ ಸುಮಾರಿಗೆ ದಾಲ್ಖೋಲಾ ಮತ್ತು ಟೆಲ್ಟಾ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಜನವರಿ 2 ರಂದು ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ರೈಲು ಪ್ರಾರಂಭವಾದ ಕೇವಲ ನಾಲ್ಕು ದಿನಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!