ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕ್ವೀನ್’ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಬಿಡುಗಡೆಗೆ ತಯಾರಿಯಲ್ಲಿ ಬ್ಯುಸಿ ಆಗಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾ ಇಂದಿರಾ ಗಾಂಧಿ ಅವರ ಅಧಿಕಾರಾವಧಿಯಲ್ಲಿ 1970ರಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ಆಧರಿಸಿದೆ.
ಇನ್ನು ಎಮರ್ಜೆನ್ಸಿ ಸಿನಿಮಾ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ಕಂಗನಾ ರಣಾವತ್, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದಾರೆ.
ಕಳೆದ ವರ್ಷದಿಂದ ಕಂಗನಾ ರಣಾವತ್ ಈ ಚಿತ್ರ ವಿವಾದಗಳಿಂದ ಸುತ್ತುವರಿದಿದೆ. 2 ಬಾರಿ ಬಿಡುಗಡೆಯನ್ನು ಮುಂದೂಡಿದ ಚಿತ್ರ ಈಗ ಥಿಯೇಟರ್ಗೆ ಬರಲು ರೆಡಿಯಾಗಿದೆ. ಕಂಗನಾ ರಣಾವತ್ ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದೆ ಮತ್ತು ಸಿನಿಮಾ ವೀಕ್ಷಿಸಲು ಆಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ.
ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯನ್ನ ಭೇಟಿ ಮಾಡಿದ್ದೇನೆ. ಅವರ ಜೊತೆ ಮಾತು ಆರಂಭಿಸುತ್ತಿದ್ದಂತೆ ನಾನು ಅವರಿಗೆ ನೀವು ಎಮರ್ಜೆನ್ಸಿ ಸಿನಿಮಾ ನೋಡ್ಬೇಕು ಎಂದು ಹೇಳಿದೆ ಎಂದಿದ್ದಾರೆ. ಅವರು ಕೂಡ ಸಿನಿಮಾ ನೋಡುವ ನಿರೀಕ್ಷೆ ಇದೆ ಎಂದು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ನಟಿ ಕಮ್ ರಾಜಕಾರಣಿ ಕಂಗನಾ ರಣಾವತ್, ‘ನಾನು ಇಂದಿರಾ ಗಾಂಧಿಯವರ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದಾಗ, ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಇದೆ ಅನ್ನೋದು ನನಗೆ ಅರಿವಾಯ್ತು. ಅವರ ಪತಿ, ಸ್ನೇಹಿತರು ಅಥವಾ ವಿವಾದಾತ್ಮಕ ವಿಚಾರಕ್ಕೂ ಸಂಬಂಧವಿಲ್ಲ ಎಂದರು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬಹಳಷ್ಟು ತಿಳಿದುಕೊಳ್ಳುವ ವಿಚಾರ ಇರುತ್ತೆ. ಮಹಿಳೆಯರ ವಿಷಯಕ್ಕೆ ಬಂದಾಗ, ಅವರು ಹೆಚ್ಚಾಗಿ ತಮ್ಮ ಸುತ್ತಲಿನ ಪುರುಷರಿಗೆ ಅವಲಂಬಿತರಾಗಿರುತ್ತಾರೆ. ಆದರೆ ನಾನು ಇಂದಿರಾ ಗಾಂಧಿ ಅವರ ಈ ಸಿನಿಮಾವನ್ನು ಅತ್ಯಂತ ಘನತೆ ಮತ್ತು ಸೂಕ್ಷ್ಮತೆಯಿಂದ ಚಿತ್ರಿಸಿದ್ದೇನೆ. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು ಎಂದು ಹೇಳಿದ್ರು.
ಇಂದಿರಾ ಗಾಂಧಿಯನ್ನು ಜನಪ್ರಿಯ ನಾಯಕಿ ಎಂದು ಬಣ್ಣಿಸಿದ ಕಂಗನಾ, ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದ ಕೆಲವು ವಿಚಿತ್ರ ಸಂಗತಿಗಳ ಹೊರತಾಗಿ, ಅವರು ಜನರಿ ಸಾಕಷ್ಟು ಪ್ರೀತಿ ಮತ್ತು ಗೌರವವನ್ನು ಪಡೆದಿದ್ದಾರೆ. ಮೂರು ಬಾರಿ ಪ್ರಧಾನಿಯಾಗುವುದು ತಮಾಷೆಯಲ್ಲ. ಅವ್ರು ಜನರ ಪ್ರೀತಿ ಗಳಿಸಿದ ಗಾಯಕಿ ಎಂದು ಕಂಗನಾ ರಣಾವತ್ ಹೇಳಿದ್ರು.
ಎಮರ್ಜೆನ್ಸಿ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದ್ದು ಇದೇ ಜನವರಿ 17 ರಂದು ಥಿಯೇಟರ್‌ಗಳಿಗೆ ಬರಲಿದೆ. ರಿಲೀಸ್‌ಗೂ ಮುನ್ನ ಟ್ರೇಲರ್ ಸಖತ್ ಸದ್ದು ಮಾಡ್ತಿದೆ.