Saturday, June 25, 2022

Latest Posts

ಉದಯೋನ್ಮುಖ ಯೋಗ ಕ್ರೀಡಾಪಟು ಅನನ್ಯ ಹಿರೇಮಠ!

-ಗಿರಿಜಾ ಶಿ. ಭಜಂತ್ರಿ

ಪ್ರಸ್ತುತ ಧಾರವಾಡದ ಶಿಗ್ಲಿಯಲ್ಲಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವ ಅನನ್ಯ ಹಿರೇಮಠ ಉತ್ತಮ ಮಲ್ಲಕಂಬ ಹಾಗೂ ಯೋಗಪಟುವಾಗಿ ನಾಡಿನ ಗಮನ ಸೆಳೆದಿದ್ದಾಳೆ. ಎಲ್‌ಕೆಜಿಯಿಂದ ಐದನೇ ತರಗತಿವರೆಗೆ ತಂದೆ ಹತ್ತಿರ ತರಬೇತಿ ಪಡೆದ ಅನನ್ಯ, ಆಗಲೇ ಶಾಲೆಯಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳಲ್ಲಿ ಮಲ್ಲಕಂಬ ಹಾಗೂ ಯೋಗಾ ಪ್ರದರ್ಶನ ನೀಡುತ್ತಿದ್ದಳು. ನಂತರ 5-8ನೇ ತರಗತಿವೆರೆಗೆ ಅಂದರೆ 2015-17ರ ವರೆಗೆ ಆಳ್ವಾಸ್‌ನಲ್ಲಿ ಬಸವರಾಜ ಬಂಡಿವಾಡ ಅವರ ಮಾರ್ಗದರ್ಶನದಲ್ಲಿ ಮಲ್ಲಕಂಬ ತರಬೇತಿ ಪಡೆದಳು .
ಅನನ್ಯ 2016 ರಿಂದ ವೇದಿಕೆ ಪ್ರದರ್ಶನ ನೀಡಲು ಆರಂಭಿಸಿದಳು. ಆಳ್ವಾಸ್ ಸಾಂಸ್ಕೃತಿಕ ಗುಂಪಿನ ಜೊತೆಗೂಡಿ 100 ಕ್ಕೂ ಹೆಚ್ಚು ಹಾಗೂ ವಿವಿಧ ಸಾಂಸ್ಕೃತಿಕ ಗುಂಪು ಜೊತೆ ಸೇರಿ, 80 ಕ್ಕೂ ಹೆಚ್ಚು ಗುಂಪು ಮಲ್ಲಕಂಬ ಪ್ರದರ್ಶನ ನೀಡಿದ್ದಾಳೆ. ವಿವಿಧ ರಾಜ್ಯಗಳಲ್ಲಿ ಮಲ್ಲಕಂಬ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಧ್ಯ ಪ್ರದೇಶ, ದೆಹಲಿ, ಛತ್ತಿಸ್‌ಗಡ್ ಹಾಗೂ ಲಕ್ಷ್ಮೇಶ್ವರ, ಬೀದರ್‌ನಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ಗುಂಪು ಹಾಗೂ ವೈಯಕ್ತಿಕ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾಳೆ. ಬಾಲವಿಕಾಸ ಅಕಾಡೆಮಿಯಿಂದ ಬಾಲಗೌರವ ಪ್ರಶಸ್ತಿ, ಸಾಕಾರ ಸಂಸ್ಥೆಯವರಿಂದ ಎಂ. ಎಲ್. ಜೋಶಿ ಉದಯೋನ್ಮುಖ ಕ್ರೀಡಾಪಟು ಪ್ರಶಸ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಪ್ರತಿಭೆಗೆ ಭಾಜನಳಾಗಿದ್ದಾಳೆ.

ಇವಳ ಯೋಗ ಪ್ರತಿಭೆಗೆ ಮಲ್ಲಕಂಬ ಹಾಗೂ ಯೋಗಾ ಪಟುವಾದ ಇವಳ ತಂದೆ ಸಾಂಬಯ್ಯ ಹಿರೇಮಠ ಗುರುವಾಗಿದ್ದರು. ನಂತರ ಚಿಕ್ಕಬಳ್ಳಾಪುರದ ಕಡೂರನಲ್ಲಿ ರಂಜಿತ್ ಕಡೂರ ಅವರ ಮಾರ್ಗದರ್ಶನದಲ್ಲಿ ಯೋಗ ತರಬೇತಿ ಪಡೆದು, ಶಾಲಾಮಟ್ಟದಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಪಡೆದಿದ್ದಾಳೆ. ನಂತರ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಛತ್ತೀಸ್‌ಘರ್ ಹಾಗೂ ಪಶ್ಚಿಮ ಬಂಗಾಳದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅನನ್ಯ 2016 ರಿಂದ ಇದುವರೆಗೂ 20 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 3ಕಂಚಿನ ಪದಕಗಳು ದೊರೆಕಿವೆ. ಮುಂದೆ ಐಎಎಸ್ ಆಗಬೇಕೆನ್ನುವ ಕನಸು ಕಾಣುತ್ತಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss