ಯೋಗ ಜಾಗೃತಿಯಲ್ಲಿ ಮಾದರಿಯಾದ ರೇಖಾ

-ಜಿ.ವಿ.ದೀಪಾವಳಿ

ಯೋಗ ಶಿಕ್ಷಕಿ ರಾಣೇಬೆನ್ನೂರಿನ ರೇಖಾ ಜಿ. ರಾಮಾಳದ ಅವರು ಉಚಿತ ಯೋಗ ತರಬೇತಿ ನೀಡುವುದರ ಜೊತೆಗೆ ಸಾಮಾಜಿಕ ಜಾಗೃತಿಯ ಕವನಗಳ ವಾಚನ ಮಾಡುತ್ತ ಜನ ಮೆಚ್ಚುಗೆ ಗಳಿಸಿದ್ದಾರೆ. ಇವರು ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಚಿತ ಯೋಗ ತರಬೇತಿ ನೀಡುತ್ತ ಆರೋಗ್ಯ ಹಾಗೂ ಸಮಾಜದ ವಾಸ್ತು ಸ್ಥಿತಿಯ ಕುರಿತು 350ಕ್ಕೂ ಅಕ ಕವನಗಳ ವಾಚನವನ್ನೂ ಸಹ ಮಾಡಿದ್ದಾರೆ. ರೇಖಾ ಅವರು ಮೋಟೆಬೆನ್ನೂರಿನ ಆಯುಷ್ ಆರೋಗ್ಯ ಇಲಾಖೆ, ತಾಲೂಕಿನ ಮೇಡ್ಲೇರಿ ಹಾಗೂ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯೋಗ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತಂಜಲಿ ಯೋಗ ಸಮಿತಿಯಿಂದ ಯೋಗ ಶಿಕ್ಷಕರ ತರಬೇತಿ ಪಡೆದು ಕಳೆದ 12 ವರ್ಷಗಳಿಂದ ತಾಲೂಕಿನ ವಿವಿಧ ಭಾಗಗಳಲ್ಲಿ ಹಾಗೂ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿ ಉಚಿತವಾಗಿ ಯೋಗ ತರಬೇತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರೇಖಾರವರಿಗೆ ಬೆನ್ನೆಲುಬಾಗಿ ಪತಿ ಗಂಗಾಧರ ಸೂರ್ತಿಯಾಗಿದ್ದಾರೆ. ಯೋಗ ತರಬೇತಿ ನೀಡುವುದೇ ತಮ್ಮ ಮೊದಲ ಸೇವೆ ಎಂಬ ಆಶಯಹೊತ್ತಿರುವ ಇವರಿಗೆ ಹಲವಾರು ಪ್ರಶಸ್ತಿಗಳೂ ಸಹ ಲಭಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!