Sunday, June 4, 2023

Latest Posts

ಮೋದಿಯಿಂದ ಎಮೋಷನಲ್ ಪಾಲಿಟಿಕ್ಸ್: ಖರ್ಗೆ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ರಾಜಕೀಯ ಲಾಭಕ್ಕೆ ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ. ಕಡಿಮೆ ಜನ ಸೇರಿದ್ದಾರೆಂಬ ಕಾರಣಕ್ಕೆ ಪ್ರಧಾನಿ ಮೋದಿ, ಈ ಕಾರ್ಯಕ್ರಮ ಹೇಗೆ ರದ್ದು ಮಾಡಬೇಕು ಎಂದು ಪ್ಲಾನ್ ಮಾಡಿದ್ದಾರೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ನಿನ್ನೆ ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪದ ಕುರಿತು ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೋದಿ ಪ್ರಚಾರ ಸಭೆಗೆ ಜನ ಸೇರಿರಲಿಲ್ಲ. 70 ಸಾವಿರ ಜನ ಸೇರುತ್ತಾರೆಂದು ಅಪೇಕ್ಷೆಯಿತ್ತು. ಬರೀ 5000 ಕ್ಕೂ ಕಡಿಮೆ ಜನ ಸೇರಿದ್ದರು. ಈ ಮಾಹಿತಿ ಮೋದಿಗೆ ಸಿಕ್ಕ ಬಳಿಕ, ಈ ಪ್ಲಾನ್ ಮಾಡಿದ್ದಾರೆ ಎಂದರು.

ನಾನು ಹೋಗಬೇಕಾದರೂ ಮೋದಿ ಬರುತ್ತಿದ್ದಾರೆ ಅಂದ್ರೆ ಐದು ನಿಮಿಷ ಮೊದಲೇ ಟ್ರಾಫಿಕ್ ನಿಲ್ಲಿಸುತ್ತಾರೆ. ನಾನು ನನ್ನ ಕಚೇರಿಗೆ ಹೋಗುವಾಗಲೂ ಮೋದಿ ಬರುತ್ತಿದ್ದಾರೆಂದ್ರೆ ತಡೆಯುತ್ತಾರೆ. ನಾನು ಗಲಾಟೆ ಮಾಡಿದ ಬಳಿಕ ಬಿಟ್ಟಿದ್ದಾರೆ. ಇದು ನನಗೇ ಆದ ಅನುಭವ ಎಂದ ಖರ್ಗೆ, ಎಮೋಷನಲ್ ಪಾಲಿಟಿಕ್ಸ್ ಮಾಡುವುದು ಬೇಡ ಎಂದು ಟೀಕಿಸಿದರು.

ನಿವೃತ್ತಿ ನ್ಯಾಯಮೂರ್ತಿ ಇಂದ ಈಗಾಗಲೇ ಪ್ರಕರಣ ತನಿಖೆಗೆ ಕೊಡಲಾಗಿದೆ. ರಾಜ್ಯ ಸರಕಾರ ಕೂಡಲೇ ಪ್ರಕರಣವನ್ನು ತನಿಖೆಗೆ ನೀಡಿದೆ. ಬೆಳಗ್ಗೆ ಈ ಬಗ್ಗೆ ನನಗೆ ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!