ಟೆಸ್ಲಾ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಉದ್ಯೋಗಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಹೊರೆಯಾಗುತ್ತಿದೆಯೆಂದು ಇತ್ತೀಚೆಗೆ ಟೆಸ್ಲಾ ತನ್ನ ಉದ್ಯೋಗಿಗಳಲ್ಲಿ ಶೇ.10ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದೆ. ಪ್ರಸ್ತುತ ವಜಾಗೊಂಡಿಎಉವ ಉದ್ಯೋಗಿಗಳು ಟೆಸ್ಲಾ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಜೂನ್‌ ತಿಂಗಳಲ್ಲಿ ವಜಾಗೊಂಡ ಮಾಜಿ ಉದ್ಯೋಗಿಗಳಾದ ಜಾನ್ ಲಿಂಚ್ ಮತ್ತು ಡಾಕ್ಸ್‌ಟನ್ ಹಾರ್ಟ್ಸ್‌ಫೀಲ್ಡ್ ಅವರು ಸಲ್ಲಿಸಿದ ಮೊಕದ್ದಮೆಯು ಉದ್ಯೋಗ ಕಡಿತದ ಮುಂಗಡ ಸೂಚನೆಯನ್ನು ನೀಡದೆ ಟೆಸ್ಲಾ ಫೆಡರಲ್ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಅಲ್ಲದೇ ವಜಾಗೊಳಿಸುವ ಸಂದರ್ಭದಲ್ಲಿ ಫೆಡರಲ್‌ ಕಾನೂನುಗಳನ್ನು ಟೆಸ್ಲಾ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರ ಹೊಂದಾಣಿಕೆ ಮತ್ತು ಮರುತರಬೇತಿ ಅಧಿಸೂಚನೆ ಕಾಯಿದೆಯಡಿಯಲ್ಲಿ ಕೆಲಸದಿಂದ ವಜಾಮಡುವಾಗ 60 ದಿನಗಳ ಅಧಿಸೂಚನೆ ನೀಡಬೇಕು. ಆದರೆ ಇದನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.

ನೆವಾಡಾದ ಟೆಸ್ಲಾ ಗಿಗಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿರುವ ಇವರಿಬ್ಬರು ಇತರ 500 ಕ್ಕೂ ಹೆಚ್ಚು ಟೆಸ್ಲಾ ಕಾರ್ಮಿಕರನ್ನು ವಜಾಗೊಳಿಸಲಾಗಿದ್ದು ಎಲ್ಲರಿಗೂ 60 ದಿನಗಳ ನೋಟೀಸ್‌ ಅವಧಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಒಗಿಸಬೇಕು ಎಂದು ಎಂದು ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!