October 10, 2026
Saturday, October 10, 2026
spot_img

CINE | ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ಇಮ್ರಾನ್‌ ಹಶ್ಮಿ ಶೂಟಿಂಗ್‌, ಸ್ಥಳೀಯರಿಗೆ ಇದು ಇಷ್ಟವಾಗ್ತಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ಖ್ಯಾತ ನಟ ಇಮ್ರಾನ್‌ ಹಶ್ಮಿ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ಶೂಟಿಂಗ್‌ ನಡೆಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್‌ ವೇಳೆ ಕ್ಲಿಪ್‌ ಒಂದು ವೈರಲ್‌ ಆಗಿದ್ದು, ಶೂಟಿಂಗ್‌ ನಿಲ್ಲಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಿನಿಮಾದ ದೃಶ್ಯ ಒಂದರ ಚಿತ್ರೀಕರಣಕ್ಕಾಗಿ ಕೆಫೆ ಮತ್ತು ಬಾರ್‌ ಎನ್ನುವ ಸೈನ್‌ಬೋರ್ಡ್‌ ಇದ್ದ ಸೆಟ್‌ನ್ನು ನಿರ್ಮಿಸಲಾಗಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹರಿದ್ವಾರಕ್ಕೆ ಬಂದು ಬಾರ್‌ ಎಂದು ಬರೆದ ಬೋರ್ಡ್‌ ನೋಡಿದರೆ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ಇದು ಬರೀ ಸೆಟ್‌ ಅಷ್ಟೆ, ಕೆಲವು ದಿನಗಳ ನಂತರ ತೆಗೆದುಬಿಡುತ್ತೇವೆ, ನಾವು ಊರಿಂದ ಹೋಗುತ್ತೇವೆ ಎಂದು ಶೂಟಿಂಗ್‌ ತಂಡದವರು ಹೇಳಿದರೂ ನಿವಾಸಿಗಳು ವಾಗ್ವಾದ ಮಾಡಿದ್ದಾರೆ.

ಹರಿದ್ವಾರವು ಭಾರತದ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಇಲ್ಲಿ ಧಾರ್ಮಿಕ ಕಾರಣಗಳಿಂದಾಗಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಥಳೀಯರೊಟ್ಟಿಗೆ ವಾಗ್ವಾದದ ವೇಳೆ ಇದೊಂದು ಕಾಲ್ಪನಿಕ ಸೆಟ್, ನಿಜವಾದ ರೆಸ್ಟೊರೆಂಟ್ ಅಲ್ಲ ಎಂದು ಹೇಳಿದರೂ ಸಹ ‘ಬಾರ್’ ಎಂಬ ಪದವಿರುವ ಬೋರ್ಡ್ ಹಾಕುವುದು ಸೂಕ್ತವಲ್ಲ ಎಂದು ಪ್ರತಿಭಟನಾಕಾರರು ವಾದಿಸಿದ್ದಾರೆ.

Must Read