ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆದಿದ್ದು, ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಮೂವರು ಉಗ್ರರು ಜೈಶ್ ಎ ಮೊಹಮ್ಮದ್ ಸಂಘಟನೆಯವರಾಗಿದ್ದು, ಒಬ್ಬ ಉಗ್ರನ ಮೂಲ ಪಾಕಿಸ್ತಾನವಾಗಿದೆ. ಪುಲ್ವಾಮಾ ಜಿಲ್ಲೆಯ ಚಂಡಗಮ್ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಭದ್ರತಾ ಪಡೆ ಮತ್ತು ಉಗ್ರಗಾಮಿಗಳ ನಡುವೆ ಎನ್‌ಕೌಂಟರ್ ನಡೆದಿದೆ.
#PulwamaEncounterUpdate: 03 #terrorists of terror outfit JeM including one #Pakistani national killed. #Incriminating materials, arms & ammunition including 2 M-4 carbine and 1 AK series rifle recovered. A big success for us: IGP Kashmir@JmuKmrPolice https://t.co/8b3SCpqBpE
— Kashmir Zone Police (@KashmirPolice) January 5, 2022
ಮೃತ ಉಗ್ರರಿಂದ ಎರಡು ಎಮ್-4 ಕಾರ್ಬೈನ್‌ಗಳು ಮತ್ತು ಒಂದು ಎಕೆ ಸರಣಿ ರೈಫಲ್ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.