2025ರ ವೇಳೆಗೆ 1.2 ಲಕ್ಷ ಕೋಟಿ ರೂ. ಆನ್‌ ಲೈನ್‌ ಖರೀದಿ ಸಾಧ್ಯತೆ: ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವದೆಲ್ಲೆಡೆ ಡಿಜಿಟಲೀಕರಣಕ್ಕೆ ಜನರು ಮುಂದಾಗಿದ್ದಾರೆ. ಅದರ ಜತೆಗೆ ಈಗ ಆನ್‌ ಲೈನ್‌ ವ್ಯಾಪಾರ ಕೂಡ ಹೆಚ್ಚಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂ.ನಷ್ಟು ಆನ್‌ ಲೈನ್‌ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಆಕ್ಸೆಂಚರ್‌ ಅಧ್ಯಯನ ನಡೆಸಿದ್ದು, ಭಾರತ ಹಾಗೂ ಬ್ರೆಜಿಲ್‌ ರಾಷ್ಟ್ರಗಳಲ್ಲಿ ಆನ್‌ ಲೈನ್‌ ವ್ಯಾಪಾರ ಹೆಚ್ಚಾಗಲಿದೆ. 2025ರ ವೇಳೆಗೆ ಸುಮಾರು 1.2 ಲಕ್ಷ ಕೋಟಿ ರೂ. ವ್ಯವಹಾರ ಇ-ವ್ಯವಹಾರದ ಮೂಲಕವೇ ನಡೆಯಲಿದೆ ಎಂದು ತಿಳಿಸಿದೆ.
ಅಂದರೆ 2025ರ ವೇಳೆಗೆ ಇ ಕಾಮರ್ಸ್‌ ಉದ್ಯಮಗಳ ವ್ಯಾಪಾರ ಮೂರು ಪಟ್ಟು ವೇಗಪಡೆದುಕೊಳ್ಳುವ ನಿರೀಕ್ಷೆ ಇದೆ.
ಹಾಗಿದ್ದರೆ ಗ್ರಾಹಕರು ಆನ್‌ ಲೈನ್‌ ನಲ್ಲಿ ಏನು ಖರೀದಿಸಬಹುದು ಎನ್ನುವ ಬಗ್ಗೆಯೂ ಆಕ್ಸೆಂಚರ್‌ ವರದಿ ತಿಳಿಸಿದೆ.
ಶೇ.13ರಷ್ಟು ವ್ಯವಹಾರ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗಳಿದ್ದರೆ, ಶೇ.7ರಷ್ಟು ಗೃಹಾಲಂಕಾರದ ವಸ್ತುಗಳು. ಇನ್ನು ಶೇ.13ರಷ್ಟು ಆಹಾರ ಪದಾರ್ಥಗಳ ವ್ಯಾಪಾರ ನಡೆಯುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!