ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಬಾರಿ ಕೊರೋನಾದಿಂದ ಸರಿಯಾದ ಪೆಟ್ಟು ತಿಂದಿರೋ ಚೀನಾ, ಇದೀಗ ಯಾವುದೇ ರಿಸ್ಕ್ ತೆಗೆದುಕೊಳ್ಳೋದಕ್ಕೂ ತಯಾರಿಲ್ಲ.
ಹೌದು, ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯಝೌ ನಗರದಲ್ಲಿ ಕೇವಲ ಮೂರು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗಿದ್ದಕ್ಕೆ ಇಡೀ ನಗರ ಲಾಕ್‌ಡೌನ್ ಮಾಡಲಾಗಿದೆ.
ಈ ನಗರದಲ್ಲಿ 12 ಲಕ್ಷ ಜನಸಂಖ್ಯೆ ಇದೆ, ಅದಲ್ಲದೇ ಮೂವರು ಕೊರೋನಾ ಬಾಧಿತರಿಗೂ ಯಾವುದೇ ಲಕ್ಷಣಗಳಿಲ್ಲ ಎನ್ನಲಾಗಿದೆ. ಈ ನಗರದಲ್ಲಿ ಲಾಕ್‌ಡೌನ್ ಜಾರಿಯಾಗಿದ್ದು, ಬಸ್, ಟ್ಯಾಕ್ಸಿ ಸೇವೆ ಇಲ್ಲದಂತಾಗಿದೆ. ಶಾಪಿಂಗ್ ಮಾಲ್‌ಗಳು, ವಸ್ತುಸಂಗ್ರಹಾಲಯ, ಪ್ರವಾಸಿ ಕೇಂದ್ರಗಳನ್ನು ಮುಚ್ಚಲಾಗಿದೆ. ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲವೂ ಲಾಕ್ ಆಗಿದೆ.
ಚೀನಾ ಝೀರೋ ಕೊರೋನಾ ಕೇಸ್ ಗುರಿ ಹೊಂದಿದ್ದು, ಈ ರೀತಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.