ಮಧ್ಯಪ್ರದೇಶದಲ್ಲಿ ಎನ್ಕೌಂಟರ್: ಇಬ್ಬರು ನಕ್ಸಲರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಧ್ಯಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಭೀಕರ ಎನ್ಕೌಂಟರ್ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಮಂಡ್ಲಾ ಮತ್ತು ಬಾಲಾಘಾಟ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಬುಧವಾರ ಹಾಕ್ ಫೋರ್ಸ್ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲೀಯರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಘಾಟ್ ಜಿಲ್ಲೆಯ ಗರ್ಹಿ ಪ್ರದೇಶ ಮತ್ತು ಮಂಡ್ಲಾ ಜಿಲ್ಲೆಯ ಮೋತಿನಾಳದ ಸುಪ್ಖಾರ್ ಪ್ರದೇಶದ ನಡುವೆ ಎನ್ಕೌಂಟರ್ ಸಂಭವಿಸಿದೆಎಂದು ಮಂಡ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ( ಎಎಸ್ಪಿ), ಗಜೇಂದ್ರ ಸಿಂಗ್ ತಿಳಿಸಿದರು.

ಇಬ್ಬರು ನಕ್ಸಲರನ್ನು ಇಲ್ಲಿಯವರೆಗೆ ಗುಂಡಿಕ್ಕಿ ಕೊಂದಿದ್ದು, ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಎಎಸ್ಪಿ ಸಿಂಗ್ ಹೇಳಿದರು, ಮೃತ ನಕ್ಸಲರು ಕನ್ಹಾ ಭೋರಮ್ದೇವ್ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಮತ್ತು ಅವರ ಚಲನವಲನದ ಬಗ್ಗೆ ಹಾಕ್ಫೋರ್ಸ್ ತಂಡವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!