ಮಂಕಿ ಫೀಸ್ಟ್​ ಗೆ ಬಂದು ಹೊಟ್ಟೆ ತುಂಬಾ ಆಹಾರ ಸವಿದ ವಾನರ ಸೈನ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರತಿ ಸ್ಥಳದಲ್ಲೂ ನಾನಾ ರೀತಿಯ ಫೆಸ್ಟಿವಲ್‌ ಮಾಡುತ್ತಾರೆ. ಅದೇ ರೀತಿಯಾಗಿ ಸೆಂಟ್ರಲ್ ಥೈಲ್ಯಾಂಡ್‌ನಲ್ಲಿ ಒಂದು ವಿಶೇಷ ಕಾರ್ಯಕ್ರಮ ಆಯೋಜನೆ ಆಗಿದ್ದು, ಅದುವೇ ವಾರ್ಷಿಕ ಕೋತಿಗಳ ಹಬ್ಬ (ಮಂಕಿ ಫೀಸ್ಟ್ ಫೆಸ್ಟಿವಲ್‌).

ಬ್ಯಾಂಕಾಕ್‌ನಿಂದ ಉತ್ತರಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಪ್ರಾಂತ್ಯದಲ್ಲಿ ಕೋತಿಗಳಿಗೆ ಭರ್ಜರಿ ಊಟ ನೀಡಲಾಯಿತು.
ಲೋಪ್​ಬುರಿ ಎನ್ನುವ ಪ್ರದೇಶದಲ್ಲಿ ಟ್ರೇಗಳನ್ನು ಹಿಡಿದಿರುವ ಕೋತಿಗಳ ಪ್ರತಿಮೆಗಳನ್ನು ಸಾಲು ಸಾಲಾಗಿ ಕಾಂಪೌಂಡ್‌ನ ಹೊರಗೆ ಜೋಡಿಸಲಾಗಿತ್ತು.ಬಳಿಕ ಆದರೆ ಸಮೀಪದಲ್ಲಿ ಸ್ವಯಂಸೇವಕರು ನಿಜವಾದ ಕೋತಿಗಳಿಗಾಗಿ ರಸ್ತೆಯುದ್ದಕ್ಕೂ ಆಹಾರವನ್ನು ಸಿದ್ಧಪಡಿಸಿದರು.

ಆಹಾರ ರೆಡಿಯಾದ ಕೂಡಲೇಕೋತಿಗಳ ಗುಂಪುಗಳು ಓಡೋಡಿ ಬಂದು ತಮ್ಮ ಆಹಾರವನ್ನು ಸವಿದರು.

ಉತ್ಸವದ ಸಂಸ್ಥಾಪಕ ಯೋಂಗ್ಯುತ್ ಕಿಟ್ವಾತನುಸೊಂಟ್ ಹೇಳುವಂತೆ .ಹಿಂದೆ, ಲೋಪ್‌ಬುರಿಯಲ್ಲಿ ಸುಮಾರು 300 ಮಂಗಗಳು ಇದ್ದವು, ಇಂದು ಅವುಗಳ ಸಂಖ್ಯೆ ಸುಮಾರು 4,000 ಕ್ಕೆ ಏರಿದೆ. ಇದೇ ಕಾರಣಕ್ಕೆ ಈ ನಗರವನ್ನು ಮಂಕಿ ಸಿಟಿ ಎಂದು ಕರೆಯಲಾಗುತ್ತದೆ, ಕೋತಿಗಳು ಮತ್ತು ಜನರು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!