ಚೀನಾದಲ್ಲಿ ದೇಶದಲ್ಲಿ ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹ: ಹೊಸ ಯೋಜನೆ ಜಾರಿಗೆ ಪ್ಲ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ (India),ವು ಜನಸಂಖ್ಯೆಯಲ್ಲಿ ಚೀನಾವನ್ನ ಹಿಂದಿಕ್ಕಿದ ನಂತರ ಚೀನಾ ಸರ್ಕಾರ (China Government) ತನ್ನ ದೇಶದಲ್ಲಿ ಹೆಚ್ಚು ಮಕ್ಕಳನ್ನ ಹೆರಲು ಪ್ರೋತ್ಸಾಹ ನೀಡುತ್ತಿದೆ.

ಇದಕ್ಕಾಗಿ 3ನೇ ಮಗು ಹೊಂದಲು ಉಚಿತ ಸಬ್ಸಿಡಿಗಳನ್ನು ನೀಡಲು ಮುಂದಾಗಿದೆ. ಜೊತೆಗೆ ವಸತಿ ಸೌಲಭ್ಯ ಹಾಗೂ ತೆರಿಗೆ ವಿನಾಯ್ತಿಯಂತಹ ಸೌಲಭ್ಯಗಳನ್ನ ಕಲ್ಪಿಸುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.

ಚೀನಾ 1980 ರಿಂದ 2015ರ ವರೆಗೆ ಒಂದು ಮಗು ನೀತಿಯನ್ನ ಜಾರಿಗೆ ತಂದಿತ್ತು. ಆದರೆ ಭಾರತವು ವಿಶ್ವದ ಅತಿಹೆಚ್ಚು ಜನಸಂಖ್ಯೆ (Population) ಹೊಂದಿದ ರಾಷ್ಟ್ರವಾದ ನಂತರ ಚೀನಾ ಮಕ್ಕಳ ಮಿತಿಯನ್ನು 3ಕ್ಕೆ ಹೆಚ್ಚಿಸಿದೆ. ಹೆಚ್ಚು ಮಕ್ಕಳನ್ನು ಹೊಂದುವ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ.

ಸೌಹಾರ್ದಯುತ ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಲು, ಮದುವೆಯಾಗಲು ಮತ್ತು ಮಕ್ಕಳನ್ನು ಹೆರುವ ಸಂಸ್ಕೃತಿಯಲ್ಲಿ ಹೊಸ ಬದಲಾವಣೆ ತರಲು ಚೀನಾ 20ಕ್ಕೂ ಹೆಚ್ಚು ನಗರಗಳಲ್ಲಿ `ಹೊಸ-ಯುಗ’ ಯೋಜನೆಯನ್ನ ಪ್ರಾರಂಭಿಸುತ್ತಿದೆ. ಇದು ಚೀನಾದಲ್ಲಿ ಜನನ ದರ ಹೆಚ್ಚಿಸಲು ಕೈಗೊಂಡ ನೂತನ ಕ್ರಮವಾಗಿದೆ.

ಹೆಣ್ಣುಮಕ್ಕಳು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು, ಮಕ್ಕಳನ್ನು ಹೊಂದಬೇಕು. ಜೊತೆಗೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಪೋಷಕರು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕಳೆದ ವರ್ಷ ಬೀಜಿಂಗ್ ಸೇರಿದಂತೆ 20 ನಗರಗಳಲ್ಲಿ ಸಂಘವು ಈಗಾಗಲೇ ಯೋಜನೆಯನ್ನ ಪ್ರಾರಂಭಿಸಿದೆ. ಜೊತೆಗೆ ಯುವಜನರಿಗೆ ಮದುವೆ ಮತ್ತು ಹೆರಿಗೆಯ ಪರಿಕಲ್ಪನೆಯ ಬಗ್ಗೆ ಹೆಚ್ಚು ಮಾರ್ಗದರ್ಶನ ನೀಡುವಂತೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!