ಹೊಸದಿಗಂತ ವರದಿ,ಮೈಸೂರು:
ಆಸ್ತಿ ವಿಚಾರವಾಗಿ ಸಂಬoಧಿಕರ ನಡುವೆ ನಡೆದ ಗಲಾಟೆ ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನ ಹಿನಕಲ್ ಗ್ರಾಮದ ನಾಯಕರ ಬೀದಿಯಲ್ಲಿ ನಡೆದಿದೆ.
ಸಾಕಮ್ಮ (೫೦) ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಗಳಾದ ಮನು, ಗೋವಿಂದನಾಯಕ, ಕಿರಣ್,ಲಕ್ಷ್ಮಿ ಎಂಬುವರನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಮನೋಜ್ ಪರಾರಿಯಾಗಿದ್ದಾನೆ
ಹಿನಕಲ್ ಗ್ರಾಮದ ದಾಸನಾಯಕ ಎಂಬುವರ ಪತ್ನಿ ಸಾಕಮ್ಮ ಹಾಗೂ ಆರೋಪಿಗಳ ನಡುವೆ ಮನೆ ಕಟ್ಟುವ ವಿಚಾರದಲ್ಲಿ ತಗಾದೆ ಇತ್ತೆಂದು ಹೇಳಲಾಗಿದೆ.ಇದೇ ವಿಚಾರದಲ್ಲಿ ಶುಕ್ರವಾರ ಶುರುವಾದ ಗಲಾಟೆ ವಿಕೋಪಕ್ಕೆ ಹೋದಾಗ, ಆರೋಪಿಗಳು ಚಾಕುವಿನಿಂದ ಸಾಕಮ್ಮಳ ಕುತ್ತಿಗೆ ಕೂಯ್ದು ಕೊಲೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.