ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಇಂಗ್ಲೆಂಡ್‌ ಆಲ್‌ರೌಂಡರ್ ಟಿಮ್ ಬ್ರೆಸ್ನನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್‌ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಕಳೆದ 20 ವರ್ಷಗಳ ಕಾಲ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡ ಬ್ರೆಸ್ನನ್ ಇದೀಗ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಬ್ರೆಸ್ನನ್ 2010-11 ಮತ್ತು 2013 ರಲ್ಲಿ ಪ್ರತಿಷ್ಠಿತ ಆಯಶಸ್ ಸರಣಿಯನ್ನು ಗೆದ್ದ ಇಂಗ್ಲೆಂಡ್ ತಂಡದ ಸದಸ್ಯರಾಗಿದ್ದು, ಜೊತೆಗೆ 2010ರಲ್ಲಿ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದಲ್ಲೂ ಭಾಗಿಯಾಗಿದ್ದರು.
‘ಇದು ತುಂಬಾ ಕಠಿಣ ನಿರ್ಧಾರ. ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ 21 ನೇ ವೃತ್ತಿಪರ ವರ್ಷಕ್ಕೆ ಮರಳಿ ಬರಲು ನಾನು ಆಫ್-ಸೀಸನ್​ ಉದ್ದಕ್ಕೂ ಶ್ರಮಿಸುತ್ತಿದ್ದೆ. ಆದರೆ ನಾನು ನಿಗದಿಪಡಿಸಿದ ಮಾನದಂಡವನ್ನು ನಾನು ತಲುಪಲು ಸಾಧ್ಯವಿಲ್ಲ. ಆದರೆ ಯಾವತ್ತು ಆಟದ ಬಗ್ಗೆ ನನ್ನಲ್ಲಿದ್ದ ಹಸಿವು ಮತ್ತು ಉತ್ಸಾಹವು ಎಂದಿಗೂ ಕುಗ್ಗುವುದಿಲ್ಲ. 2022ರ ಸೀಸನ್‌ನಲ್ಲಿ ನಾನು ಆಡಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ದೇಹ ಸಿದ್ಧವಾಗಿಲ್ಲ. ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಬಹಳ ಹೆಮ್ಮೆಯಿಂದ ನೋಡುತ್ತೇನೆ ಮತ್ತು ವಾರ್ವಿಕ್‌ಷೈರ್ ಮತ್ತು ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ. ಎಂದು ಟಿಮ್ ಬ್ರೆಸ್ನನ್ ವಿದಾಯ ಪತ್ರದಲ್ಲಿ ತಮ್ಮ ಮನದಾಳದ ಮಾತುಗಳನ್ನು ಬರೆದಿದ್ದಾರೆ.
ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ. 85 ಏಕದಿನ ಪಂದ್ಯಗಳಲ್ಲಿ 109 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ ಆಡಿದ 34 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!