ಭರ್ಜರಿ ತಿರುಗೇಟು ನೀಡಿದ ಸ್ಟೋಕ್ಸ್‌ ಪಡೆ: ಸೌತ್‌ ಆಫ್ರಿಕಾ ವಿರುದ್ದ ಇಂಗ್ಲೆಂಡ್‌ ಗೆ ಇನ್ನಿಂಗ್ಸ್‌ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾಸಿ ಸೌತ್‌ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಹೀನಾಯವಾಗಿ ಸೋತು ಮುಖಭಂಗಕ್ಕೀಡಾಗಿದ್ದ ಬೆನ್‌ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ ಅನ್ನು ಇನ್ನಿಂಗ್‌ ಅಂತರದಿಂದ ಗೆಲ್ಲುವ ಮೂಲಕ ಭರ್ಜರಿಯಾಗಿ ತಿರುಗೇಟು ನೀಡಿದೆ.
ಮೊದಲ ಇನ್ನಿಂಗ್ಸ್‌ ನಲ್ಲಿ ಕೇವಲ 151 ರನ್‌ ಗಳಿಗೆ ಹರಿಣಗಳ ಪಡೆ ಆಲೌಟ್‌ ಆಗಿತ್ತು. ಇದಕ್ಕೆ ಪ್ರತಿಯಲ್ಲಿ ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌ ನಲ್ಲಿ 415 ರನ್‌ ಗಳ ಬೃಹತ್‌ ಮೊತ್ತವನ್ನು ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್‌ ನಲ್ಲೂ ಬ್ಯಾಟಿಂಗ್‌ ನಲ್ಲಿವಿಫಲವಾದ ಸೌತ್‌ ಆಫ್ರೀಕಾ ಕೇವಲ 179 ರನ್‌ ಕಲೆಹಾಕಲಷ್ಟೇ ಶಕ್ತವಾಗಿ ಇನ್ನಿಂಗ್ಸ್‌ ಹಾಗೂ 85 ರನ್‌ ಗಳಿಂದ ಹೀನಾಯವಾಗಿ ಸೋಲು ಕಂಡಿದೆ.
ಇಂಗ್ಲೆಂಡ್‌ ಪರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಒಲಿ ರಾಬಿನ್ಸನ್‌ (43ಕ್ಕೆ 4), ಜೇಮ್ಸ್‌ ಅಂಡರ್‌ ಸನ್‌ (30ಕ್ಕೆ 3) ಉತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!