ಭುಜ್‌ನಲ್ಲಿ ʻಸ್ಮೃತಿವನ್ʼ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2001ರ ಭೂಕಂಪದ ಸಂದರ್ಭದಲ್ಲಿ ಜನರು ತೋರಿದ ದೃಢತೆಯನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ಭುಜ್ ಪ್ರದೇಶದಲ್ಲಿ ʻಸ್ಮೃತಿವನ್ʼ ಸ್ಮಾರಕವನ್ನು ಭಾನುವಾರ ಉದ್ಘಾಟಿಸಿದರು. ಸ್ಮೃತಿ ವನವು ಪ್ರಾಣ ಕಳೆದುಕೊಂಡ ಕಚ್ ಜನರ ಅದ್ಭುತ ಹೋರಾಟದ ಮನೋಭಾವಕ್ಕೆ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ನಂತರ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸ್ಮೃತಿವನ್ ಮ್ಯೂಸಿಯಂನಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಭುಜ್‌ನಲ್ಲಿ 2001 ರ ಭೂಕಂಪದ ಸಮಯದಲ್ಲಿ 13,000 ಜನರು ಸಾವನ್ನಪ್ಪಿದವರ ಗೌರವಾರ್ಥವಾಗಿ ಸುಮಾರು 470 ಎಕರೆ ಪ್ರದೇಶದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು.

ಈ ಸ್ಮಾರಕವು ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡ ಜನರ ಹೆಸರನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯದಲ್ಲಿ, ಗುಜರಾತ್‌ನ ಭೌಗೋಳಿಕತೆ, 2001 ರ ಭೂಕಂಪದ ನಂತರದ ಪುನರ್ನಿರ್ಮಾಣ ಕಾರ್ಯಕ್ರಮಗಳು ಮತ್ತು ಯಶಸ್ಸಿನ ಕಥೆಗಳನ್ನು ವಿವರಿಸುವ ಚಲನಚಿತ್ರಗಳನ್ನು ಸ್ಥಾಪಿಸಲಾಗಿದೆ. 5ಡಿ ಸಿಮ್ಯುಲೇಟರ್ ಸಹಾಯದಿಂದ ಭೂಕಂಪದ ಅನುಭವವನ್ನು ಮರುಸೃಷ್ಟಿಸಲು ಒಂದು ಬ್ಲಾಕ್, ಭೂಕಂಪದ ಸಮಯದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತೊಂದು ಬ್ಲಾಕ್ ಇದೆ.

ಅದೇ ರೀತಿ, 2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಮಡಿದ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶ್ರದ್ಧಾಂಜಲಿ ಅರ್ಪಿಸಲು ಕಚ್ ಜಿಲ್ಲೆಯ ಅಂಜಾರ್ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾದ ‘ವೀರ್ ಬಾಲಕ್ ಸ್ಮಾರಕ’ವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!