ಚಾಹಲ್‌ ಬೌಲಿಂಗ್ ಎದುರು ಮಂಕಾದ ಇಂಗ್ಲೆಂಡ್‌: ಭಾರತಕ್ಕೆ 247 ರನ್‌ ಟಾರ್ಗೆಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ವಿರುದ್ಧ ಇಂಗ್ಲೆಂಡ್‌ 2ನೇ ಏಕದಿನ ಪಂದ್ಯದಲ್ಲಿ 49 ಓವರ್‌ಗಳಲ್ಲಿ 246 ರನ್‌ ಪೇರಿಸಿತು.
ಯಜುವೇಂದ್ರ ಚಾಹಲ್‌ ಆಕರ್ಷಕ ಬೌಲಿಂಗ್ ನಿಂದ ಇಂಗ್ಲೆಂಡ್‌ 102 ರನ್‌ಗಳಿಸುವ ವೇಳೆಗಾಗಲೇ ಇಂಗ್ಲೆಂಡ್‌ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋ, ಜೋ ರೂಟ್‌, ನಾಯಕ ಜೋಸ್‌ ಬಟ್ಲರ್‌ ಹಾಗೂ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಇನ್ನೇನು 150 ರನ್‌ಗಳ ಒಳಗಾಗಿ ಇಂಗ್ಲೆಂಡ್‌ ಆಲೌಟ್‌ ಆಗುತ್ತದೆ ಎನ್ನುವ ಹಂತದಲ್ಲಿಯೇ ಮೊಯಿನ್‌ ಅಲಿ, ಲಿವಿಂಗ್‌ ಸ್ಟೋನ್‌ರೊಂದಿಗೆ 6ನೇ ವಿಕೆಟ್‌ಗೆ 46 ರನ್‌ ಹಾಗೂ 7ನೇ ವಿಕೆಟ್‌ಗೆ ವಿಲ್ಲಿ ಜೊತೆ 62 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!