ಸ್ಟುವರ್ಟ್ ಬ್ರಾಡ್‌‌ ಗೆ ಮತ್ತೊಂದು ಕರಾಳದಿನ: ಒಂದೇ ಓವರ್‌ನಲ್ಲಿ 35 ರನ್‌ ಸಿಡಿಸಿದ ಬೂಮ್ರಾ..!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ 5 ನೇ ಟೆಸ್ಟ್‌ ನಲ್ಲಿ ಭಾರತದ ನಾಯಕ ಹಾಗೂ ಕೆಳಕ್ರಮಾಂಕದ ಬ್ಯಾಟರ್ ಜಸ್ಪ್ರೀತ್‌ ಬೂಮ್ರಾ  ಬ್ಯಾಟಿಂಗ್‌ ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ವೇಗಿ ಸ್ಟುವರ್ಟ್‌ ಬ್ರಾಡ್‌ ರ ಒಂದೇ ಓವರ್‌ ನಲ್ಲಿ ಬರೋಬ್ಬರಿ 35 ರನ್‌ ಕಲೆಹಾಕುವ ಮೂಲಕ ಟೆಸ್ಟ್‌ ಕ್ರಿಕೆಟ್‌ ನ ಇತಿಹಾಸದಲ್ಲೇ ಓವರ್ ಒಂದರಲ್ಲಿ ಅತ್ಯಧಿಕ ರನ್‌ ಕಲೆಹಾಕಿದ ದಾಖಲೆ ಬರೆದಿದ್ದಾರೆ.
ಈ ಮೂಲಕ ಇಂಗ್ಲಿಷ್‌ ವೇಗಿ ಸ್ಟುವರ್ಟ್‌ ಬ್ರಾಡ್‌ ಪಾಲಿಗೆ ಮತ್ತೊಮ್ಮೆ ಕರಾಳ ಇತಿಹಾಸ ಮರುಕಳಿಸಿದೆ. 2008ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟಿ.20 ವಿಶ್ವಕಪ್‌ ನಲ್ಲಿ ಭಾರತದ ಎಡಗೈ ದಾಂಡಿಗ ಯುವರಾಜ್‌ ಸಿಂಗ್‌ ಸ್ಟುವರ್ಟ್‌ ಬ್ರಾಡ್‌ ರ ಒಂದೇ ಓವರ್‌ ನಲ್ಲಿ ಆರು ಸಿಕ್ಸರ್‌ ಸಿಡಿಸಿ 36 ರನ್‌ ಕಲೆಹಾಕಿದ್ದರು.
ಎಜ್‌ ಬಸ್ಟನ್‌ ನಲ್ಲಿ ಸಾಗುತ್ತಿರುವ 5ನೇ ಟೆಸ್ಟ್‌ ನ 83 ನೇ ಓವರ್‌ ಎಸೆದ ಬ್ರಾಡ್‌ ಬೂಮ್ರಾರಿಂದ ಭಾರೀ ದಂಡನೆಗೆ ಒಳಗಾದರು.  ಓವರ್‌ ನ ಮೊದಲ ಎಸೆತ 4, ಎರಡನೇ ಎಸೆತದಲ್ಲಿ ವೈಡ್+‌ 5 ರನ್‌, ನಂತರದ ಎಸೆತದಲ್ಲಿ ನೋಬಾಲ್‌ + ಸಿಕ್ಸ್‌, ನಂತರದ ಎಸೆತದಲ್ಲಿ ಎಸೆತದಲ್ಲಿ 4, ಮೂರನೇ ಎಸೆತದಲ್ಲಿ 4, ನಾಲ್ಕನೇ ಎಸೆತದಲ್ಲಿ ಮತ್ತೊಂದು 4, ಐದನೇ ಎಸೆತದಲ್ಲಿ 6, ಆರನೇ ಎಸೆತಯದಲ್ಲಿ 1 ರನ್‌ ಸೇರಿದಂತೆ ಒಟ್ಟಾರೆ 35 ರನ್‌ ಸಿಡಿಸಿದ ಬೂಮ್ರಾ ದಾಖಲೆಗಳನ್ನು ಪುಡಿಗಟ್ಟಿದರು.
ಈ ಮೂಲಕ  ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಓವರ್‌ನಲ್ಲಿ ಅತಿಹೆಚ್ಚಿನ ರನ್‌ ಕಲೆಹಾಕಿದ ದಾಖಲೆ ಬೂಮ್ರಾ ಹೆಸರಿಗೆ ದಾಖಲಾಗಿದೆ. 16 ಎಸೆತ ಎದುರಿಸಿದ ಬೂಮ್ರಾ 34 ರನ್‌ ಸಿಡಿಸಿದರು. ಈ ಹಿಂದೆ 2003 ರಲ್ಲಿ ಜೋಹಾನ್ಸ್‌ಬರ್ಗ್ ಟೆಸ್ಟ್‌ ನಲ್ಲಿ ವೆಸ್ಟ್‌ ಇಂಡೀಸ್‌ ನ ಲಾರಾ  ಪೀಟರ್ಸನ್ ಎಸೆದ ಒಂದೇ ಓವರ್ನಲ್ಲಿ 28 ರನ್‌ ಕಲೆಹಾಕಿದ್ದು ದಾಖಲೆಯಾಗಿತ್ತು.  ಪರ್ತ್ 2013ರ ಪರ್ತ್‌ ಟೆಸ್ಟ್‌ ನಲ್ಲಿ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಹಾಗೂ 2020ರಲ್ಲಿ ದ. ಆಫ್ರೀಕಾದ ಕೆ ಮಹಾರಾಜ್  ಪೋರ್ಟ್ ಎಲಿಜಬೆತ್ ನಲ್ಲಿ 28 ರನ್‌ ಕಲೆಹಾಕಿಕುವ ಮೂಲಕ ದಾಖಲೆ ಬರೆದಿದ್ದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ ನಲ್ಲಿ ಭಾರತ 416 ರನ್‌ ಕಲೆಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!