Tuesday, August 16, 2022

Latest Posts

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್ ಸ್ಟಾರ್ ಗೆ ಹಾಡಿನ ಮೂಲಕ ಉಡುಗೊರೆ ನೀಡಿದ ‘ಗಾಳಿಪಟ 2’!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ನಟ ಗಣೇಶ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆ ಹಾಗೂ ಕಾಮಿಡಿ ಶೋಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಸ್ಟಾರ್ ಪಟ್ಟ ಅಲಂಕರಿಸಿದ ಗಣೇಶ್ ಇಂದು 41ನೇ ವಸಂತಕ್ಕೆ ಕಾಲಿಟ್ಟರು.
ಆದರೆ, ಕೆಲವು ಕಾರಣಗಳಿಂದ ಈ ವರ್ಷ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಾನು ಮನೆಯಲ್ಲಿಯೂ ಇರುವುದಿಲ್ಲ. ಯಾರೂ ಸಹ ಮನೆ ಹತ್ತಿರ ಬರಬೇಡಿ ಅಂತಾ ಅವರು ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇತ್ತ ಗಣೇಶ್ ಗೆ ಗಾಳಿಪಟ 2 ಚಿತ್ರ ತಂಡ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದೆ. ಹಾಡಿನಲ್ಲಿ ಗಣೇಶ್ ಹ್ಯಾಂಡ್ಸಮ್​ ಆಗಿ ಕಾಣಿಸಿಕೊಂಡಿದ್ದು, ವೈಭವಿ ಶಾಂಡಿಲ್ಯ ಜೊತೆ ರೊಮ್ಯಾನ್ಸ್ ಮಾಡಿರುವ ಹಾಡು ಇದಾಗಿದೆ.

ಗಣೇಶ್‌ ಹಾಗೂ ನಿರ್ದೇಶಕ ಯೋಗರಾಜ್‌ ಭಟ್‌ ಕಾಂಬಿನೇಶನಲ್ಲಿ ಬರುತ್ತಿರುವ ಗಾಳಿಪಟ 2 ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಬಿಡುಗಡೆ ಆಗಿರುವ ನಾನಾಡದ ಮಾತೆಲ್ಲವ ಹಾಡು ಸಖತ್ ರೊಮ್ಯಾಂಟಿಕ್ ಆಗಿದೆ.

ಸರ್ದಾರ ಜಯಂತ್‌ ಕಾಯ್ಕಿಣಿ ಈ ಹಾಡನ್ನ‌ ಬರೆದಿದ್ದು, ಸೋನು ನಿಗಮ್‌ ಕಂಠದಾನಾ ಮಾಡಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಕುದುರೆಮುಖದ ಹಸಿರು, ನೀರು, ಕಾಡಿನ ಮಧ್ಯೆ ಈ ಹಾಡನ್ನ ಚಿತ್ರೀಕರಿಸಲಾಗಿದೆ.

ನಿರ್ಮಾಪಕ ರಮೇಶ್‌ ರೆಡ್ಡಿ, ಈ ಸಿನಿಮಾವನ್ನ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಆಗಸ್ಟ್ ತಿಂಗಳಲ್ಲಿ ಗಾಳಿಪಟ 2 ಸಿನಿಮಾ ಬಿಡುಗಡೆ ಆಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss