Sunday, December 3, 2023

Latest Posts

ಜ್ಞಾನವಾಪಿ ಮಸೀದಿ ವಿವಾದ: ತೀರ್ಪು ಕಾಯ್ದಿರಿಸಿದ ವಾರಾಣಸಿ ಕೋರ್ಟ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ, ಮಸೀದಿ ಸರ್ವೇ ಕಾರ್ಯ ನಿಲ್ಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ವಾರಾಣಸಿ ಕೋರ್ಟ್​ ತೀರ್ಪು ಕಾಯ್ದಿರಿಸಿದೆ. ಹೀಗಾಗಿ ನಾಳೆ ಆದೇಶ ನೀಡುವ ಸಾಧ್ಯತೆ ಇದೆ.

ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಪರರು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ವಿರುದ್ಧವಾಗಿ ಮುಸ್ಲಿಂ ಸಂಘಟನೆ, ಮಸೀದಿ ಪರವಾಗಿ ಶಿವಲಿಂಗ ಪತ್ತೆಯಾದ ಜಾಗವನ್ನು ನಿರ್ಬಂಧಿಸಿದ್ದರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.

ಇಂದು ಕೋರ್ಟ್​ನಲ್ಲಿ ನಡೆದ ವಾದ – ಪ್ರತಿವಾದದ ವೇಳೆ ಮಸೀದಿ ಪರ ವಕೀಲರು, 1991 ರ ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲೇಖಿಸಿ ಜ್ಞಾನವಾಪಿ ಸಮೀಕ್ಷೆ ಮತ್ತು ಪ್ರಕರಣವನ್ನು ಪರಿಗಣಿಸಲು ಕೋರಿದ್ದಾರೆ. ಇನ್ನೊಂದೆಡೆ ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ವುಜು (ಪ್ರಾರ್ಥನೆ) ಮಾಡಿದ್ದಾರೆ. ಇವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಬೇಕು ಎಂದು ಹಿಂದೂಪರ ವಕೀಲರು ವಾದಿಸಿದ್ದಾರೆ.

ಇದೀಗ ವಾರಾಣಸಿ ಕೋರ್ಟ್ ನಾಳೆ ನೀಡಲಿರುವ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ಹೇಗೆ ಮುಂದುವರಿಯಲಿದೆ ಎಂಬುದು ನಿರ್ಧಾರವಾಗಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!