ಕನ್ನಡ ಕಿರುತೆರೆಯಲ್ಲಿ ಶೀಘ್ರವೇ ಪ್ರಸಾರ ಕಾಣಲಿದೆ ತೆಲುಗಿನ ಹಿಟ್‌ ಚಿತ್ರ ʼಪುಷ್ಪಾʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತೆಲುಗು ಬ್ಲಾಕ್ ಬಸ್ಟರ್ ಹಿಟ್ ಪುಷ್ಪಾ ದಿ ರೈಸ್‌ ಚಿತ್ರ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣಲಿದೆ.
ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಂಡಿದ್ದ ಪುಷ್ಪಾ ವಿಶ್ವಾದ್ಯಂತ 300 ಕೋಟಿಗೂ ಹೆಚ್ಚಿನ ಕಲೆಕ್ಷನ್‌ ಮಾಡಿದೆ. ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಹಿಟ್‌ ಸಿನೆಮಾ ಎನಿಸಿಕೊಂಡಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ ಗೆ ಜೋಡಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು.
ಈಗ ಮನೆಯಲ್ಲಿ ಕುಳಿತು ‘ಪುಷ್ಪ ಚಿತ್ರದ ಕನ್ನಡ ಅವತರಣಿಕೆ ನೋಡುವ ಸಮಯ ಬಂದಿದೆ. ಸ್ಟಾರ್‌ ಸುವರ್ಣಾ ವಾಹಿನಿಯಲ್ಲಿಇದೇ ಮಾರ್ಚ್‌ 27 ರಂದು ಮಧ್ಯಾಹ್ನ 12 ಗಂಟೆಗೆ ಟಿವಿಯಲ್ಲಿಪ್ರಸಾರ ಕಾಣಲಿದೆ. ಅದೇ ದಿನ ಚಿತ್ರವು ತೆಲುಗಿನಲ್ಲಿ ಸ್ಟಾರ್ ಸುವರ್ಣ, ತೆಲುಗಿನಲ್ಲಿ ಸ್ಟಾರ್ ಮಾ, ತಮಿಳಿನಲ್ಲಿ ಸ್ಟಾರ್ ವಿಜಯ್ ಮತ್ತು ಮಲಯಾಳಂನಲ್ಲಿ ಏಷ್ಯಾನೆಟ್ ಟಿವಿಯಲ್ಲಿ ಪ್ರಸಾರ ಕಾಣಲಿದೆ.
ಘಟಾನುಘಟ್ಟಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಖ್ಯಾತ ನಟರಾದ ಫಹದ್ ಫಾಸಿಲ್, ಡಾಲಿ ಧನಂಜಯ್, ಅನುಸೂಯಾ, ರಾವ್ ರಮೇಶ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!