ಸನಾತನ ಧರ್ಮದ ಉನ್ನತಿ ಭಗವಂತನ ಸಂಕಲ್ಪ: ಮೋಹನ್ ಭಾಗವತ್

ಹೊಸದಿಗಂತ ಡಿಜಿಟಲ್ ಡೆಸ್ಕ್
ಗಾಜಿಪುರ:
ಸನಾತನ ಧರ್ಮದ ಉನ್ನತಿ ಭಗವಂತನ ಸಂಕಲ್ಪವಾಗಿದ್ದು, ಅಗತ್ಯ ಬಂದಾಗಲೆಲ್ಲಾ ಭಗವಂತ ಭಾರತ ಹಿಂದು ರಾಷ್ಟ್ರವನ್ನು ಉದ್ಧಾರ ಮಾಡುತ್ತಾನೆ ಮತ್ತು ಈಗ ಆ ಕಾಲ ಬಂದಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.
ಉತ್ತರ ಪ್ರದೇಶದ ಗಾಜಿಪುರ ಹಾಥಿಯಾರಾಮ್ ಮಠದಲ್ಲಿ ಮಠದ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಲ್ಲಿ ನಡೆಯುತ್ತಿರುವ ಎಲ್ಲವೂ ವಿಧಿಯ ಸೂತ್ರದ ಪ್ರಕಾರ ನಡೆಯುತ್ತದೆ. ನಾವು ಆ ಧಾರ್ಮಿಕ ಮತ್ತು ಮಾನವ ಕಲ್ಯಾಣದ ನಿಜವಾದ ಕಾರ್ಯದ ಸಾಧನವಾಗಿದ್ದೇವೆ ಎಂದ ಭಾಗವತ್ ಅವರು, ರಾಮಸೇತು ನಿರ್ಮಾಣದಲ್ಲಿ ಅಳಿಲು ಮಾಡಿರುವ ಶ್ರಮದ ಬಗ್ಗೆ ಜನರಿಗೆ ತಿಳಿಸಿದರು. ಇಷ್ಟು ದೊಡ್ಡ ರಾಮಸೇತುವಿನ ಕಾರ್ಯದಲ್ಲಿ ಅಳಿಲು ತನ್ನ ದೇಹದ ತುಂಬಾ ಮರಳನ್ನು ತಂದಿ ಆ ರಾಮಸೇತುವಿಗೆ ಹಾಕುವ ಮೂಲಕ ಇದರ ನಿರ್ಮಾಣಕ್ಕೆ ಕೊಡುಗೆ ನೀಡಿತು. ಅಂತಹ ಪರಿಸ್ಥಿತಿಯಲ್ಲಿ, ಅದು ಕಣ್ಣಿಗೆ ಸಣ್ಣದಾಗಿ ಕಾಣಬಹುದು, ಆದರೆ ಆ ಅಳಿಲು ಮಾತನಾಡಬಲ್ಲುದಾಗಿದ್ದರೆ, ಅದು ತನ್ನ ಮೊಮ್ಮಕ್ಕಳಿಗೂ ಅದನ್ನು ಹೇಳುತ್ತಿತ್ತು ಎಂದರು.
ಮಠದಲ್ಲಿರುವ ಸಿದ್ಧಿದಾತ್ರಿ ಮಾತೆಗೆ ಪೂಜೆ ಸಲ್ಲಿಸಿದ ಅವರು, ಮಠದ ಆವರಣದಲ್ಲಿರುವ ಹಲವು ದೇವಸ್ಥಾನಗಳಲ್ಲಿ ಧ್ವಜಕ್ಕೆ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಬಳಿಕ ಮಹಾಮಂಡಲೇಶ್ವರ ಭವಾನಿ ನಂದನ ಯತಿ ಮಹಾರಾಜ್ ಅವರು ಮೋಹನ್ ಭಾಗವತ್ ಅವರಿಗೆ ಮಠದ ವತಿಯಿಂದ ಗೌರವಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!