ಹೊಸದಿಗಂತ ವರದಿ, ವಿಜಯಪುರ:
ಇಡೀ ವಕ್ಫ್ ಆಸ್ತಿ ರಾಷ್ಟ್ರೀಕರಣ ಮಾಡಬೇಕು. ದೇಶದಲ್ಲಿ ಇನ್ನೊಂದು ಪಾಕಿಸ್ತಾನ ಆಗಬಾರದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಕ್ಫ್ ಕೋಲಾಹಲ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈತರ, ಮಠಗಳ ಆಸ್ತಿಗಳಿಗೆ ಕರಾಳ ಶಾಸನ ಆಗಲಿದೆ. ನೆಹರು ಮಾಡಿದ ಪಾಪದ ಕೆಲಸ ವಕ್ಫ್ ಎಂದರು.
ಸ್ಟಾರ್ ಪ್ರಚಾರಕರಿಂದ ಯತ್ನಾಳ್ ಕೈಬಿಟ್ಟ ವಿಚಾರಕ್ಕೆ, ವಿಜಯೇಂದ್ರ ಸ್ಟಾರ್ ಮಾಡೋದಿಲ್ಲ, ಜನ ಮಾಡುತ್ತಾರೆ. ವಿಜಯೇಂದ್ರನ ಕೇಳಿ ಸ್ಟಾರ್ ಪ್ರಚಾರಕ ಆಗಬೇಕಿಲ್ಲ, ಜನ ನನ್ನನ್ನು ಸ್ಟಾರ್ ಮಾಡಿದ್ದಾರೆ ಎಂದರು.
ಸಾವಿರಾರು ಕೋಟಿ ತಿಂದಿದ್ದಾರೆ, ಅದನ್ನು ಖರ್ಚು ಮಾಡಿ ಏನೋ ಮಾಡಲು ಹೊರಟಿದ್ದಾರೆ. ಅಭ್ಯರ್ಥಿಗಳಿಗೆ ಹಿಂದೂ ಓಟು ಬೇಕಾದರೆ ಕರೆಯಲಿ ಇಲ್ಲದಿದ್ದ ಬಿಡಲಿ ಎಂದರು.
ಗ್ಯಾರಂಟಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರದ ಗ್ಯಾರಂಟಿ ಮುಗಿದಿದೆ. ಇನ್ನಾರು ತಿಂಗಳಲ್ಲಿ ನೌಕಕರಿಗೆ ಕೊಡಲು ಹಣವಿರುವುದಿಲ್ಲ. ಮುಂದಿನ ಚುನಾವಣೆಯಲ್ಲಿ ವಕ್ಫ್ ಬಲಿಸುವವರು ಒಬ್ಬರೂ ಬರೋದಿಲ್ಲ ಎಂದರು.
ರೈತರ ಅಹವಾಲು ಆಲಿಸಲು ಬಂದಿದ್ದ ಬಿಜೆಪಿ ಟೀಂ ವಿಚಾರಕ್ಕೆ, ವಿಜಯೇಂದ್ರ ಡೆನ್ಮಾರ್ಕ್ ನಲ್ಲಿದ್ದನಾ ?, ಕರ್ನಾಟಕದಲ್ಲಿ ಬಿಜೆಪಿ ಉಳಿಯಬೇಕಾದರೆ ವಿಜಯೇಂದ್ರನ ಯಾವುದೇ ಕುರ್ಚಿಯಲ್ಲಿ ಕೂರಿಸಬಾರದು. ಹೈಕಮಾಂಡ್ ನನ್ನ ಬಗ್ಗೆಯೂ ಹಾಗೂ ವಿಜಯೇಂದ್ರನ ಬಗ್ಗೆಯೂ ಮೌನ ವಹಿಸಿದೆ, ಅವರಿಗೆ ಇಬ್ಬರನ್ನೂ ಬಿಡಲು ಆಗುತ್ತಿಲ್ಲ ಎಂದರು.
ಯಡಿಯೂರಪ್ಪನ ಕೈಯಲ್ಲಿ ಮಂತ್ರಿ ಆಗೋದಿಲ್ಲ ಎಂದು ಬಿಟ್ಟಿದ್ದೇನೆ. ಅಪ್ಪ ಮಗ ಸೇರಿ ಬಹಳ ಅನ್ಯಾಯ ಮಾಡಿದ್ದಾರೆ ಎಂದರು.
ಜಮೀರ್ ಅಹ್ಮದ್ ವಿರುದ್ಧ ಯತ್ನಾಳ್ ಆಕ್ರೋಶ ಬಗ್ಗೆ ಪ್ರತಿಕ್ರಿಯಿಸಿ, ರೈತರ ಆಸ್ತಿಗಳಿಂದ ವಕ್ಪ್ ಹೆಸರು ಕೈಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ನ.3 ರ ಒಳಗಾಗಿ ತೆಗೆಯದಿದ್ದರೆ ನ. 4 ರಿಂದ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಸಿಎಂ ಹೇಳಿದ್ದಕ್ಕೆ ನಾನು ಮಾಡಿದ್ದೇನೆ ಎಂದು ಖಾನ್ ಹೇಳಿದ್ದಾನೆ. ಸಿಎಂ ಅವರನ್ನೇ ಸಿಗಿಸಿಕೊಂಡಿದ್ದಾರೆ, ಸಿಎಂ ಅವರೇ ಹೇಳಬೇಕು. ಕರ್ನಾಟಕದಾದ್ಯಂತ ದೊಡ್ಡ ಹೋರಾಟ ನಡೆಯಲಿದೆ ಎಂದರು.