ನಿಷೇಧವಿದ್ದರೂ ಪಟಾಕಿ ಸಿಡಿಸಿ ಸಂಭ್ರಮಿಸಿದ ಜನ:ವಿಶ್ವದ ಅತಿ ಹೆಚ್ಚು ಕಲುಷಿತ ನಗರವಾದ ದೆಹಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಪಟಾಕಿ ಸಿಡಿಸಲು ನಿಷೇಧವಿದ್ದರೂ ದೀಪಾವಳಿ ಹಿನ್ನೆಲೆಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಇದೀಗ ಗಾಳಿಯ ಗುಣಮಟ್ಟ ತೀವ್ರವಾಗಿ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ಜನತೆ ಉಸಿರಾಡಲೂ ಸಂಕಷ್ಟಪಡಿವ ಸ್ಥಿತಿ ನಿರ್ಮಾಣವಾಗಿದೆ.

ಶುಕ್ರವಾರ ಬೆಳಗ್ಗೆ 6 ಗಂಟೆಗೆ ಏರ್ ಕ್ವಾಲಿಟಿ ಇಂಡೆಕ್ಸ್ (AQI – ಗಾಳಿ ಗುಣಮಟ್ಟ ಸೂಚ್ಯಂಕ) 359 ನಲ್ಲಿ ದಾಖಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಇದು ʻಅತ್ಯಂತ ಕಳಪೆʼ ವಿಭಾಗಕ್ಕೆ ಸೇರಿದ್ದು ಈ ಮೂಲಕ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

ಲಜಪತ್ ನಗರ್, ಕಲ್ಕಾಜಿ, ಛತ್ತರ್‌ಪುರ, ಜೌನಾಪುರ್, ಕೈಲಾಶ್ ಪೂರ್ವ, ಸಾಕೇತ್, ರೋಹಿಣಿ, ದ್ವಾರಕಾ, ಪಂಜಾಬಿ ಬಾಗ್, ವಿಕಾಸಪುರಿ, ದಿಲ್ಶಾದ್ ಗಾರ್ಡನ್, ಬುರಾರಿ ಮತ್ತು ಪೂರ್ವ ಮತ್ತು ಪಶ್ಚಿಮ ದೆಹಲಿಯ ಹಲವಾರು ಪ್ರದೇಶಗಳು ಪಟಾಕಿಗಳನ್ನುಸಿಡಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಬೆಳಿಗ್ಗೆ 6 ಗಂಟೆಗೆ, ಬುರಾರಿ ಕ್ರಾಸಿಂಗ್ (394), ಜಹಾಂಗೀರ್‌ಪುರಿ (387), ಆರ್‌ಕೆ ಪುರಂ (395), ರೋಹಿಣಿ (385), ಅಶೋಕ್ ವಿಹಾರ್ (384), ದ್ವಾರಕಾ ಸೆಕ್ಟರ್ 8 (375), ಐಜಿಐ ವಿಮಾನ ನಿಲ್ದಾಣ (375), ಮಂದಿರ ಮಾರ್ಗ ( 369), ಪಂಜಾಬಿ ಬಾಗ್ (391), ಆನಂದ್ ವಿಹಾರ್ (395), ಸಿರಿ ಫೋರ್ಟ್ (373) ಮತ್ತು ಸೋನಿಯಾ ವಿಹಾರ್ (392) ಗಾಳಿಯ ಗುಣಮಟ್ಟ ದಾಖಲಾಗಿದೆ.

ಎನ್‌ಸಿಆರ್ ಪ್ರದೇಶಗಳಾದ ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ್‌ಗಳು ಕ್ರಮವಾಗಿ 293, 316 ಮತ್ತು 348 ಎಕ್ಯೂಐ ಮಟ್ಟವನ್ನು ದಾಖಲಿಸಿವೆ. ಅಕ್ಟೋಬರ್ 14 ರಂದು, ದೆಹಲಿ ಸರ್ಕಾರವು ನಗರದಾದ್ಯಂತ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧವನ್ನು ವಿಧಿಸಿತು. ಅದಾಗ್ಯೂ ಜನರು ಅಧಿಕ ಪ್ರಮಾಣ ಪಟಾಕಿ ಸಿಡಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!