ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಪುಟ್ಟ ಅತಿಥಿಯ ಆಗಮನವಾಗಿದೆ. ಅದನ್ನು ಪ್ರಧಾನಿಯವರು ಪ್ರೀತಿಯಿಂದ ಅಪ್ಪಿ ಮುದ್ದಾಡಿ ವೆಲ್ಕಮ್ ಮಾಡಿದ್ದಾರೆ.. ಯಾರೀ ಪುಟಾಣಿ ಅತಿಥಿ?
ಅದು ಬೇರೆ ಯಾರೂ ಅಲ್ಲ, ಪುಟ್ಟ ಕರು, ಅದನ್ನು ನೋಡಿದರೆ ಎಂಥವರಿಗೂ ಒಂದು ಸಾರಿ ಅಪ್ಪಿ ಮುದ್ದಾಡದೆ ಇರಲು ಮನಸ್ಸಾಗದೆ ಇರದು.
ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ನಿವಾಸದಲ್ಲಿದ್ದ ಹಸು ಕರು ಹಾಕಿದ್ದು ಕಂದು ಬಣ್ಣದ ಕರುವಿನ ಹಣೆಯ ಮೇಲೆ ಬಿಳಿಯ ಬೆಳಕಿನ ಗುರುತು ಇದೆ. ಹೀಗಾಗಿ ಪ್ರಧಾನಿಯವರು ಕರುವಿಗೆ ಪ್ರೀತಿಯಿಂದ ‘ದೀಪಜ್ಯೋತಿ’ ಎಂದು ಹೆಸರಿಟ್ಟಿದ್ದಾರೆ.
@XpressBengaluru @NewIndianXpress @narendramodi @PMOIndia ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸಕ್ಕೆ ಹೊಸ ಪುಟ್ಟ ಅತಿಥಿಯ ಆಗಮನವಾಗಿದೆ. pic.twitter.com/6jzQ015S0k
— kannadaprabha (@KannadaPrabha) September 14, 2024