ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿನ ದರ ಏರಿಕೆ ಸುಳಿವು ಕೊಟ್ಟ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಈಗ ರೈತರ ಕಾರಣ ಹೇಳಿ ದರ ಹೆಚ್ಚಿಸುತ್ತಿದ್ದಾರೆ. ಆದರೆ ಅವರಿಗೆ ಕೊಡುತ್ತಾರೋ ಇಲ್ಲವೋ ಎಂಬುದು ಅನುಮಾನ ಎಂದಿದ್ದಾರೆ.
ಕಾಂಗ್ರೆಸ್ ಎಂದರೆ ಕಳ್ಳರ ಪಾರ್ಟಿ. ಈ ಹಿಂದೆ ಯಾಕೆ ಹಾಲಿನ ದರವನ್ನು ಹೆಚ್ಚಳ ಮಾಡಿದ್ದರು? ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರೈತರಿಗೆ ಪ್ರೋತ್ಸಾಹಧನ ಕೊಡಲಿಲ್ಲ. ಈಗ ರೈತರ ಕಾರಣ ಹೇಳಿ ಹಾಲಿನ ದರ ಹೆಚ್ಚಳ ಮಾಡುತ್ತಿದ್ದಾರೆ. ರೈತರಿಗೆ ಹಣ ಕೊಡುವುದು ಅನುಮಾನವಿದೆ. ನಾನು ಭವಿಷ್ಯ ಹೇಳುತ್ತೇನೆ, ಇದು ಕೇವಲ ಎರಡು ತಿಂಗಳು ಮಾತ್ರ. ಆಮೇಲೆ ಬಂದ್ ಆಗುತ್ತದೆ ಎಂದರು.
ಈ ಹಿಂದೆ ಸೀಮೆಎಣ್ಣೆ, ಹಾಲಿನ ಡೇರಿ ಬಳಿ ಕ್ಯೂ ನಿಲ್ಲುತ್ತಿದ್ದರು. ಹಾಗೆ ಮುಖ್ಯಮಂತ್ರಿ ರೇಸ್ನಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದ ನಿತ್ಯವೂ ಒಂದು ಹಗರಣ ಬೆಳಕಿಗೆ ಬರುತ್ತಿದೆ. ಆಡಳಿತ ಕುಸಿದು ಬಿದ್ದಿದೆ, ಅದೇ ರೀತಿ ಕೆಎಂಎಫ್ ಕೂಡ ಆಗುತ್ತಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.