ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 13 ವರ್ಷಗಳ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ನಗರಕ್ಕೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಗ್ರ್ಯಾಂಡ್ ಕೊಟ್ಟಿದ್ದಾರೆ.
ಜನಾರ್ದನ ರೆಡ್ಡಿಗೆ ಅಭಿಮಾನಿಗಳು ಜೆಸಿಬಿಯಿಂದ ಬೃಹತ್ ಹಾರ ಹಾಕಿ ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದ್ದಾರೆ.
ಜನಾರ್ದನ ರೆಡ್ಡಿ ಬರುವ ಮಾರ್ಗ ದೂದ್ದಕ್ಕೂ ಬರುವ ವೃತ್ತಗಳಲ್ಲಿ ಹೂವಿನ ಮಳೆ ಸುರಿಸಲಾಗಿದೆ. ಬ್ಯಾಂಡ್, ತಾಷ್ಯಾ, ಗೊರವ ಕುಣಿತ, ತಮಟೆ ವಾದ್ಯ, ಸುಮಂಗಲಿಯರ ಆರತಿ ಹೀಗೆ ಹತ್ತಾರು ಕಲಾ ತಂಡಗಳಿಂದ ರೆಡ್ಡಿಗೆ ಭರ್ಜರಿ ಸ್ವಾಗತ ದೊರಕಿದೆ.