Monday, October 3, 2022

Latest Posts

ಉಬ್ರಂಗಳ ಶ್ರೀ ಕ್ಷೇತ್ರಕ್ಕೆ ಪರಿಸರ ಪ್ರೇಮಿ ಆರ್.ಕೆ.ನಾಯರ್ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಶ್ರೀ ಶಾಸ್ತಾರ ದೇವಸ್ಥಾನಕ್ಕೆ ಭಾನುವಾರ ಗುಜರಾತ್‌ನ ಉದ್ಯಮಿ, ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ. ಆರ್.ಕೆ. ನಾಯರ್ ಭೇಟಿ ನೀಡಿ ಮಧ್ಯಾಹ್ನ ಮಹಾಪೂಜೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
ದಶಂಬರ್ ೨೫ರಿಂದ ಕ್ಷೇತ್ರದ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಪ್ರಸ್ತುತ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಡೆದ ಸರಳಸಮಾರಂಭದಲ್ಲಿ ಅವರು ಮಾತನಾಡಿ ಸನಾತನ ಸಂಸ್ಕೃತಿಯ ಉಳಿವಿಗೆ ಪೂರಕವಾದ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ನಮ್ಮ ದೇವಾಲಯ, ಪರಿಸರದ ಬಗ್ಗೆ ಉತ್ತಮವಾದ ಕಾಳಜಿಯನ್ನಿಟ್ಟುಕೊಂಡು ನಮ್ಮ ಕರ್ತವ್ಯವನ್ನು ನಿರ್ವಹಿಸಿ ಮುಂದಿನ ತಲೆಮಾರಿಗೆ ಬಲುದೊಡ್ಡ ಉಡುಗೊರೆಯನ್ನು ನಾವು ನೀಡಬೇಕು. ದೇವಾಲಯಗಳ ಪುನರುತ್ಥಾನದ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಕಾರ್ಯ ನಮ್ಮದಾಗಬೇಕು ಎಂದರು.
ಶ್ರೀಕ್ಷೇತ್ರದ ವತಿಯಿಂದ ಆಡಳಿತ ಮಂಡಳಿ ಸದಸ್ಯ ಶ್ರೀನಾಥ್ ಕುಣಿಕುಳ್ಳಾಯ ಶಾಲು ಹೊದೆಸಿ ಅವರನ್ನು ಗೌರವಿಸಿದರು.


ಕ್ಷೇತ್ರದ ಪ್ರಧಾನ ಅರ್ಚಕ ಭಾಸ್ಕರ ಐತಾಳ್, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಜಯರಾಜ್ ಕುಣಿಕುಳ್ಳಾಯ, ರಾಜಶೇಖರ ಮಾಸ್ತರ್, ಸುಧಾಮ ಪದ್ಮಾರು, ಗಣರಾಜ ಭಟ್ ಉಬ್ರಂಗಳ, ಸತೀಶ್ ಕುರುಪ್ ಉಬ್ರಂಗಳ, ಕೃಷ್ಣ ಮಣಿಯಾಣಿ ಉಬ್ರಂಗಳ, ಕೃಷ್ಣ ಮಣಿಯಾಣಿ ಅಗಲ್ಪಾಡಿ, ಗೋಪಾಲ ಉಬ್ರಂಗಳ, ಈಶ್ವರ ಮಾಸ್ತರ್ ಮೈಲ್ತೊಟ್ಟಿ, ಚಂದ್ರಶೇಖರ ಕುರುಪ್ ಉಬ್ರಂಗಳ, ಬಾಬುಮಣಿಯಾಣಿ ಜಯನಗರ, ರಮೇಶ್ ಕೃಷ್ಣ ಪದ್ಮಾರು, ಸುಬ್ರಹ್ಮಣ್ಯ ಮಾಸ್ತರ್ ಮೈಲ್ತೊಟ್ಟಿ, ಶ್ರೀಧರ ಪದ್ಮಾರು, ಪೀತಾಂಬರನ್ ಉಪಸ್ಥಿತರಿದ್ದರು. ಯುವ ವಿಭಾಗದ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬುಮಾಸ್ತರ್ ಅಗಲ್ಪಾಡಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!