ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು, ಅಪ್ರಾಪ್ತ ಬಾಲಕಿಯೊಬ್ಬಳು ಮಾಡಿರುವ ದೃಢೀಕರಿಸದ ಆರೋಪಗಳನ್ನು ಒಳಗೊಂಡ ಹೆಚ್ಚುವರಿ ಜೆಫ್ರಿ ಎಪ್ಸ್ಟೈನ್ ಫೈಲ್‌ಗಳನ್ನು ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದೆ.
ಈ ದಾಖಲೆಗಳು 2019ರಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ಗೆ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿವೆ.
ಇವುಗಳನ್ನು ಹಿಂದಿನ ಪರಿಶೀಲನೆಯ ಸಮಯದಲ್ಲಿ ತಪ್ಪಾಗಿ ತಡೆಹಿಡಿಯಲಾಗಿದೆ ಎಂದು ಇಲಾಖೆ ಹೇಳಿದೆ. ಆರೋಪ ಹೊರಿಸಿದ ಅಪ್ರಾಪ್ತ ಬಾಲಕಿ ಹೇಳಿಕೆ ದೃಢೀಕರಿಸಲು ಎಫ್‌ಬಿಐ ನಾಲ್ಕು ಬಾರಿ ಸಂದರ್ಶಿಸಿತು. ಆದರೆ, ಆ ಸಂದರ್ಶನಗಳಲ್ಲಿ ಒಂದರ ಸಾರಾಂಶವನ್ನು ಮಾತ್ರ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಫೈಲ್‌ಗಳಲ್ಲಿ ಸೇರಿದೆ.
ಸುಮಾರು 13ರಿಂದ 15 ವರ್ಷ ವಯಸ್ಸಾಗಿದ್ದಾಗ ಟ್ರಂಪ್ ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಕೆ ಆರೋಪಿಸಿದ್ದಾಳೆ. ಎಪ್ಸ್ಟೀನ್ ಮೂಲಕ ನ್ಯೂಯಾರ್ಕ್ ಅಥವಾ ನ್ಯೂಜೆರ್ಸಿಯಲ್ಲಿ ಟ್ರಂಪ್ ತನಗೆ ಪರಿಚಯವಾಗಿದ್ದರು ಎಂದು ಆಕೆ ತಿಳಿಸಿದ್ದಾಳೆ. ಟ್ರಂಪ್ ತನ್ನ ಮೇಲೆ ಓರಲ್ ಸೆಕ್ಸ್ ಮಾಡಲು ಒತ್ತಾಯಿಸಿದ್ದರು ಮತ್ತು ತಾನು ನಿರಾಕರಿಸಿದಾಗ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಹೇಳಿಕೊಂಡಿದ್ದಾಳೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಅವರು ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಮತ್ತು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲದ ಆರೋಪಗಳು ಎಂದು ತಳ್ಳಿಹಾಕಿದ್ದಾರೆ. ಎಪ್ಸ್ಟೀನ್ ಜತೆಗಿನ ತನ್ನ ಸಂಬಂಧವು 2000ರ ದಶಕದ ಮಧ್ಯ ಭಾಗದಲ್ಲಿ ಕೊನೆಗೊಂಡಿತು ಮತ್ತು ಅವರ ಅಕ್ರಮ ಚಟುವಟಿಕೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.



