ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ಶುಲ್ಕ: ಬಿಸಿಸಿಐ ಮಹತ್ವದ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ದೊಡ್ಡ ಘೋಷಣೆ ಮಾಡಿದ್ದು, ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ (ಗುತ್ತಿಗೆ) ಪಂದ್ಯ ಶುಲ್ಕ ಒಂದೇ ಆಗಿರುತ್ತದೆ ಎಂದು ಹೇಳಿದೆ.

ಮ್ಯಾಚ್ ಫೀ ವಿಷಯದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷರ ಕ್ರಿಕೆಟಿಗರಿಗೆ ಸರಿಸಮನಾಗಿ ತರುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದು ಹಲವು ರೀತಿಯಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿದೆ ಎನ್ನಲಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಪುರುಷ ಆಟಗಾರರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ಈ ಕುರಿತು ಅವರು ಟ್ವೀಟ್‌ ಮಾಡಿದ್ದು “ತಾರತಮ್ಯವನ್ನು ಎದುರಿಸಲು ಬಿಸಿಸಿಐಯ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಮಹಿಳಾ ಕ್ರಿಕೆಟಿಗರಿಗೆ ನಾವು ವೇತನ ಇಕ್ವಿಟಿ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ. ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋದಂತೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ. ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಪುರುಷ ಆಟಗಾರರಿಗೆಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್ ( 15 ಲಕ್ಷ ರೂ.), ODI (6 ಲಕ್ಷ ರೂ.), T20I (3 ಲಕ್ಷರೂ.) ಗಳನ್ನು ಸಮಾನವಾಗಿ ಪಾವತಿಸಲಾಗುತ್ತದೆ. ಈಕ್ವಿಟಿಯನ್ನು ಪಾವತಿಸುವುದು ನಮ್ಮ ಮಹಿಳಾ ಕ್ರಿಕೆಟಿಗರಿಗೆ ನನ್ನ ಬದ್ಧತೆಯಾಗಿದೆ ಮತ್ತು ಅವರ ಬೆಂಬಲಕ್ಕಾಗಿ ನಾನು ಅಪೆಕ್ಸ್ ಕೌನ್ಸಿಲ್‌ಗೆ ಧನ್ಯವಾದ ಹೇಳುತ್ತೇನೆ” ಎಂದು ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಹಿಳಾ ಐಪಿಎಲ್‌ನ ಮೊದಲ ಋತುವನ್ನು 2023 ರಲ್ಲಿ ಆಡಲಾಗುವುದು ಎಂದು ಬಿಸಿಸಿಐ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ನಿರ್ಧರಿಸಿದ ಕೆಲವೇ ದಿನಗಳಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

2017 ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ತಂಡವು ರನ್ನರ್ ಅಪ್ ಸ್ಥಾನ ಗಳಿಸಿದಾಗಿನಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿನ ಆಸಕ್ತಿಯು ಏರುಮುಖವಾಗಿದೆ. ಅಂದಿನಿಂದ ತಂಡವು 2020 ರಲ್ಲಿ T20 ವಿಶ್ವಕಪ್‌ನ ಫೈನಲ್‌ಗೆ ತಲುಪಿದೆ ಮತ್ತು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!