ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎರ್ರಿಸ್ವಾಮೀ ಕರಡಿ ನೇಮಕ

ಹೊಸದಿಗಂತ ವರದಿ ಬಳ್ಳಾರಿ:
ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ವಾಡಾ) ನೂತನ ಅಧ್ಯಕ್ಷರಾಗಿ ಎರ್ರಿಸ್ವಾಮಿ ಕರಡಿ ಅವರು ನೇಮಕಗೊಂಡಿದ್ದಾರೆ. ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದ ಎರ್ರಿಸ್ವಾಮೀ ಕರಡಿ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದು, ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ, ವಿಜಯನಗರ ಜಿಲ್ಲಾಧ್ಯಕ್ಷರಾದ ಕೆ.ಮುರಹರಗೌಡ, ಚೆನ್ನಬಸವನಗೌಡ ಪಾಟೀಲ್ ಅವರು ಸೇರಿದಂತೆ ಪಕ್ಷದ ವರಿಷ್ಠರು ಇವರನ್ನು ಗುರುತಿಸಿ ಸೂಕ್ತ ಸ್ಥಾನ ಕಲ್ಪಿಸಿ ಪಕ್ಷದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೂ ಸ್ಥಾನಮಾನ ಸಿಗಲಿದೆ ಎನ್ನುವದನ್ನು ಸಾಬೀತು ಪಡಿಸಿದ್ದಾರೆ.

ಸದಸ್ಯರಾಗಿ ಸಂಡೂರು ತಾಲೂಕಿನ ನಿಡಗುರ್ತಿ ಗ್ರಾಮದ ಪ್ರಭಾಕರ್ ಎಚ್, ಚಪ್ಪರದಹಳ್ಳಿಯ ಪಾಂಡು ಬಿ., ಕುಡುತಿನಿಯ ಎಂ.ಹನುಮಕ್ಕ, ತೋರಣಗಲ್ಲು ಗ್ರಾಮದ ರಾಘವೇಂದ್ರ ಕೆ.ಅವರನ್ನು ನೇಮಕ ಮಾಡಿ, ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ.ಕೆ.ಅವರು ಆದೇಶ ಹೊರಡಿಸಿದ್ದಾರೆ. ನೂತನ ಅಧ್ಯಕ್ಷ ಎರ್ರಿಸ್ವಾಮಿ ಕರಡಿ ಅವರು, ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ಸಂಡೂರು ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದಾರೆ, ಇದರ ಜೊತೆಗೆ ಬಿಜೆಪಿ ಬಳ್ಳಾರಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಣಿ ಸದಸ್ಯರಾಗಿ ಒಂದು ಬಾರಿ ಸೇವೆ ಸಲ್ಲಿಸಿದ್ದಾರೆ.

ಸಂಡೂರು ತಾಲೂಕಿನಲ್ಲಿ ಬೂತ್ ಮಟ್ಟದ ಸಶಕ್ತಿಕರಣ ಸಂಚಾಲಕರಾಗಿ 3ವರ್ಷ ಸೇವೆ ಸಲ್ಲಿಸಿದ್ದಾರೆ, ಎಬಿವಿಪಿಯಲ್ಲೂ ಸುಮಾರು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತರಿಗೂ ಸ್ಥಾನಮಾನಗಳು ದೊರೆಯಲಿವೆ, ಪಕ್ಷದ ತತ್ವ ಹಾಗೂ ಸಿದ್ಧಾಂತಗಳ ಆಧಾರದ ಮೇಲೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದರೆ ಪಕ್ಷ ಖಂಡಿತ ಗುರುತಿಸಿ ಸೂಕ್ತ ಸ್ಥಾನ ಮಾನ ಕಲ್ಪಿಸಲಿದೆ, ಇದಕ್ಕೆ ನಾನೇ ಉದಾಹರಣೆ ಎಂದು ನೂತನ ಅಧ್ಯಕ್ಷ ಎರ್ರಿಸ್ವಾಮಿ ಕರಡಿ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!