ಹೊಸದಿಗಂತ ವರದಿ,ಕಲಬುರಗಿ:
ಮುಸ್ಲಿಂ ಟೆರರಿಸ್ಟ್, ಮುಸ್ಲಿಂ ಕೋಮುವಾದಿಗಳಿಗೆ ಮಂಗಳೂರು ಹೇಳಿ ಮಾಡಿಸಿದ ಸ್ಥಳವಾಗಿದ್ದು, ಮಂಗಳೂರುಕರ್ನಾಟಕದಲ್ಲಿಯೇ ಅತೀ ಸೂಕ್ಷ್ಮ ಪ್ರದೇಶವಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಇತ್ತೀಚಿಗೆ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಮಂಗಳೂರಿನ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಹಿಂದೂಗಳನ್ನು ಹಾಡು ಹಗಲೇ ಮುಸ್ಲಿಮರು ಹತ್ತೆ ಮಾಡುತ್ತಿದ್ದಾರೆ. ಈ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ, ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪಿಸುವಂತೆ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ದಿನೇ ದಿನೇ ಉಗ್ರ ಚಟುವಟಿಕೆಗಳು ಹೆಚ್ಚಾಗುತ್ತಿದರು. ಶಂಕಿತರ ಮೇಲೆ ಯಾಕೆ ಪೊಲೀಸರು ನಿಗಾ ವಹಿಸುತ್ತಿಲ್ಲ. ಆಟೋದಲ್ಲಿ ಬಾಂಬ್ ಇಟ್ಟುಕೊಂಡು ಓಡಾಡುತ್ತಿದ್ದರು ಸಹ ಗುಪ್ತಚರ ಇಲಾಖೆ ಏನು ಮಾಡುತ್ತಿದೆ.? ಪೊಲೀಸರು ಏನು ಮಾಡ್ತಿದ್ದಾರೆ.? ಎಂದು ಪ್ರಶ್ನಿಸಿ, ಇಂತಹ ಉಗ್ರ ಹುಳಗಳನ್ನು ಎನ್ ಕೌಂಟರ್ ಮಾಡಿ ಬಿಸಾಡಬೇಕು. ಅಪರಾಧ ಚಟುವಟಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಹೇಳಿದರು.
ಪೊಲೀಸರು ಕೇವಲ ಹಿಂದೂಗಳ ಮೇಲೆ ನಿಗಾ ವಹಿಸುತ್ತಿದ್ದಾರೆ. ಹೊರತು, ಮುಸ್ಲಿಂ ರ ಮೇಲೆ ಯಾವುದೇ ಪೊಲೀಸರು ನಿಗಾ ಇಡುತ್ತಿಲ್ಲ. ಇದನೆಲ್ಲ ನೋಡುತ್ತಿದರೆ. ಮುಸ್ಲಿಮರನ್ನ ಕಂಡರೆ ಪೊಲೀಸರಿಗೆ ಭಯವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.