ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಕರ್ನಾಟಕ ಹಾಲು ಒಕ್ಕೂಟದ ನಂದಿನ ಹಾಲಿನ ಉತ್ಪನ್ನ ಮಳಿಗೆ ಮಾದರಿಯಲ್ಲಿ ಕುರಿ ಹಾಗೂ ಮೇಕೆ ಮಾಂಸ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ರಾಜ್ಯಾದ್ಯಂತ ತನ್ನ ಮಳಿಗೆಗಳ ಮೂಲಕ ಪ್ಯಾಕ್ ಮಾಡಿದ ಕುರಿ ಹಾಗೂ ಮೇಕೆ ಮಾಂಸವನ್ನು ಸಮಂಜಸವಾದ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆ ಇದೆ.
ಕುರಿ ಮತ್ತು ಮೇಕೆಗಳಿಗೆ ರೈತರು ಉತ್ತಮ ಬೆಲೆ ಪಡೆಯಬಹುದು, ಹಾಗೇ ಜನರಿಗೂ ಗುಣಮಟ್ಟದ ಮಾಂಸ ಒದಗಿಸಲು ಸಹಾವಾಗುತ್ತದೆ. ಈ ಯೋಜನೆಯಿಂದ ರೈತರಿಂದ ನೇರವಾಗಿ ಕುರಿ ಮೇಕೆಗಳನ್ನು ಖರೀದಿ ಮಾಡಲಾಗುತ್ತದೆ. ನಂದಿನಿ ರೀತಿಯಲ್ಲಿ ಮಾಂಸದ ಬ್ರ್ಯಾಂಡ್‌ನ ರಚನೆ ಶೀಘ್ರದಲ್ಲೇ ಆಗಲಿದೆ.