September 28, 2026
Monday, September 28, 2026
spot_img

ಎಥನಾಲ್ ಗುರಿ ಸಾಧನೆ: 20%ಕ್ಕಿಂತ ಹೆಚ್ಚು ಮಿಶ್ರಣ ಇಲ್ಲ ಎಂದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಬಳಕೆಯ ಗುರಿಯನ್ನು ನಿಗದಿತ ಸಮಯಕ್ಕಿಂತ ಮುಂಚೆಯೇ ಸಾಧಿಸಿರುವ ಕೇಂದ್ರ ಸರ್ಕಾರ, ಸದ್ಯಕ್ಕೆ 20 ಶೇಕಡಕ್ಕಿಂತ ಹೆಚ್ಚಿನ ಎಥನಾಲ್ ಮಿಶ್ರಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

E20 ಗುರಿ ಪೂರ್ಣ

ಕೇಂದ್ರದ ಮಾಹಿತಿ ಪ್ರಕಾರ, 20% ಎಥನಾಲ್ ಮಿಶ್ರಣದ ಗುರಿಯನ್ನು ಐದು ವರ್ಷಗಳ ಮುಂಚೆಯೇ ಸಾಧಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ತಜ್ಞರ ಶಿಫಾರಸು ಹಾಗೂ ವಾಹನ ತಯಾರಿಕಾ ಕಂಪನಿಗಳ ಅಭಿಪ್ರಾಯದ ಬಳಿಕವೇ ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ:

ವಾಹನಗಳಿಗೆ ಹಾನಿ ಇಲ್ಲ

E20 ಇಂಧನ ಬಳಕೆಯಿಂದ ಎಂಜಿನ್ ಹಾನಿ, ಇಂಧನ ಪಂಪ್ ಸಮಸ್ಯೆ ಅಥವಾ ದೊಡ್ಡ ಮಟ್ಟದ ತಾಂತ್ರಿಕ ದೋಷಗಳು ವರದಿಯಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಹಳೆಯ ವಾಹನಗಳಲ್ಲಿ ಮೈಲೇಜ್‌ನಲ್ಲಿ ಅಲ್ಪ ಪ್ರಮಾಣದ ಇಳಿಕೆ ಮಾತ್ರ ಕಂಡುಬರಬಹುದು ಎಂದು ಹೇಳಿದೆ.

ರೈತರು ಮತ್ತು ದೇಶಕ್ಕೆ ಲಾಭ

ಎಥನಾಲ್ ಯೋಜನೆಯಿಂದ ವಿದೇಶಿ ವಿನಿಮಯ ಉಳಿತಾಯ, ಕಚ್ಚಾ ತೈಲ ಆಮದು ಕಡಿತ ಹಾಗೂ ಕಾರ್ಬನ್ ಹೊರಸೂಸುವಿಕೆ ಇಳಿಕೆಯಾಗಿದೆ. ಜೊತೆಗೆ ಕಬ್ಬು, ಜೋಳ ಮತ್ತು ಇತರೆ ಧಾನ್ಯಗಳಿಂದ ಎಥನಾಲ್ ಉತ್ಪಾದನೆ ಹೆಚ್ಚಳದಿಂದ ರೈತರಿಗೆ ಹೆಚ್ಚುವರಿ ಆದಾಯವೂ ದೊರೆತಿದೆ.

Must Read