ಇಂಧನ ಕೊರತೆ ನಮ್ಮ ಅಸ್ತಿತ್ವಕ್ಕೇ ಆತಂಕ ತಂದಿದೆ ಅಂದ್ರು ಯುರೋಪಿನ ಉದ್ದಿಮೆದಾರರು

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಷ್ಯವು ಯುರೋಪಿಗೆ ಅನಿಲ ಪೂರೈಕೆಯನ್ನು ನಿಲ್ಲಿಸಿರುವುದು ಅಲ್ಲಿನ ಜನಜೀವನವನ್ನು ದುಬಾರಿಯಾಗಿಸುವುದರ ಜತೆಗೆ ಉದ್ದಿಮೆಗಳನ್ನು ಅಲುಗಾಡಿಸಿಬಿಟ್ಟಿದೆ. ಉಕ್ಕು ಆಧರಿತ ಲೋಹಗಳ ಸಂಬಂಧದ ಉತ್ಪಾದನೆಗಳಲ್ಲಿ ತೊಡಗಿಕೊಂಡಿರುವ ಯುರೋಪಿನ ಕಂಪನಿಗಳ ಸಿಇಒಗಳೆಲ್ಲ ಒಂದಾಗಿ ತಮ್ಮ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

ಐರೋಪ್ಯ ಒಕ್ಕೂಟವು ವಿದ್ಯುತ್ ದರವನ್ನು ಕಡಿಮೆಯಾಗಿಸುವುದಕ್ಕೆ ಕಾರ್ಯಪ್ರವೃತ್ತವಾಗದಿದ್ದರೆ ತಮ್ಮೆಲ್ಲ ಲೋಹದ ಉತ್ಪಾದನಾ ಘಟಕಗಳು ಮುಚ್ಚಿಹೋಗಲಿವೆ ಎಂದು ಕಂಪನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪತ್ರದಲ್ಲಿ ಎಚ್ಚರಿಸಿದ್ದಾರೆ.

ಜಿಂಕ್, ಅಲುಮಿನಿಯಂ, ಸಿಲಿಕಾನ್ ಈ ಎಲ್ಲ ವಿಭಾಗಗಳಲ್ಲಿ ವಿದ್ಯುತ್ ಕೊರತೆಯಿಂದ ಯುರೋಪಿನ ಅರ್ಧದಷ್ಟು ಉತ್ಪಾದನೆಗಳು ಅದಾಗಲೇ ಚೀನಾದಂಥ ದೇಶಗಳ ಹೊರಗುತ್ತಿಗೆಗೆ ಹೋಗಿವೆ. ಚೀನಾದಲ್ಲಿ ಅಷ್ಟೇ ಪ್ರಮಾಣದ ಈ ಲೋಹಗಳ ಉತ್ಪಾದನೆಗೆ ಯುರೋಪಿಗಿಂತ ಹೆಚ್ಚಿನ ಮಾಲಿನ್ಯ ಉಂಟಾಗುತ್ತದೆ ಎಂಬುದು ಉದ್ದಿಮೆದಾರರ ಒಕ್ಕೂಟ ಮುಂದಿಟ್ಟಿರುವ ಇನ್ನೊಂದು ವಾದ.

ಸೆಪ್ಟೆಂಬರ್ 9ರಂದು ಯುರೋಪ್ ಒಕ್ಕೂಟದ ಪ್ರಮುಖ ಸಚಿವರೆಲ್ಲ ಸಭೆ ಸೇರಿ ವಿದ್ಯುತ್ ದರ ಕಡಿತಕ್ಕೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!