‘ಹೀಟ್‌ ವೇವ್‌’ಗೆ ಯುರೋಪ್‌ ತಲ್ಲಣ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಒಂದೆಡೆ ಉಕ್ರೇನ್‌ ಮೇಲಿನ ಆಕ್ರಮಣದಿಂದ ಯುರೋಪ್‌ ನಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದ್ದು ಇನ್ನೊಂದೆಡೆ ರಷ್ಯಾವು ನೈಸರ್ಗಿಕ ಅನಿಲ ಪೂರೈಕೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಇವೆಲ್ಲದರ ನಡುವೆ ಶಾಖದಲೆಗಳ ಹೊಡೆತಕ್ಕೆ ಸಿಕ್ಕು ಯುರೋಪ್‌ ನಲುಗುತ್ತಿದೆ. ಆಹಾರ ಬೆಲೆಗಳು ಜೊತೆಗೆ ಇಂಧನ ಬೆಲೆಗಳೆರಡೂ ಏರಿಕೆಯಾಗಿದೆ.

ಏಪ್ರಿಲ್ 2020 ರಿಂದ ಏಪ್ರಿಲ್ 2022 ರವರೆಗೆ ಯುರೋಪ್‌ನಲ್ಲಿ ವಿದ್ಯುತ್ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿದೆ. ತಮ್ಮ ಮನೆಗಳಿಗೆ ಕೂಲರ್‌ ಅಥವಾ ಹೀಟರ್‌ ಹೊಂದಿಲ್ಲದವರ ಪಾಲಿಗೆ ವಿದ್ಯುತ್‌ ಬೆಲೆ ಹೆಚ್ಚಳವು ಅಧಿಕ ದುಷ್ಪರಿಣಾಮ ಬೀರುತ್ತಿದ್ದು ಯುರೋಪ್‌ನಲ್ಲಿ ವಾರ್ಷಿಕವಾಗಿ ಸುಮಾರು 3,000 ಜನರು ಶಾಖ-ಸಂಬಂಧಿತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕೆಲ ವರದಿಗಳ ಪ್ರಕಾರ 2050ರ ವರೆಗೆ ಇದು 10 ಪಟ್ಟು ಹೆಚ್ಚಾಗಬಹುದು ಎನ್ನಲಾಗಿದೆ.

ಪರ್ಯಾಯ ಶಕ್ತಿಮೂಲಗಳ ಮೇಲೂ ಅವಲಂಬನೆ ಸಾಧ್ಯವಾಗುತ್ತಿಲ್ಲ ಕಲ್ಲಿದ್ದಲು ಬೆಲೆಗಳು ಏರುತ್ತಿದ್ದು ಇನ್ನೊಂದೆಡೆ ಪರಮಾಣು ಸ್ಥಾವರಗಳೂ ಕೂಡ ಸಾಮರ್ಥ್ಯಕ್ಕಿಂತ ಕಡಿಮೆ ಶಕ್ತಿ ಉತ್ಪಾದಿಸುತ್ತಿವೆ. ಸೌರ ಶಕ್ತಿ ಮತ್ತು ಗಾಳಿಶಕ್ತಿಬಳಸಿ ವಿದ್ಯುತ್‌ ಉತ್ಪಾದನೆಗೆ ಯುರೋಪ್ ತರಾತುರಿಯಲ್ಲಿದ್ದರೂ ಹೆಚ್ಚುತ್ತಿರುವ ಸಲಕರಣೆಗಳ ವೆಚ್ಚ ಮತ್ತು ಪೂರೈಕೆ ಸರಪಳಿ ವಿಳಂಬದಿಂದಾದೂ ಕೂಡ ಅಡಚಣೆಗೊಳಗಾಗಿದೆ. ತನ್ನ ಇಂಧನ ಬೇಡಿಕೆಗಳನ್ನು ಪೂರೈಸಲು ಯುರೋಪ್‌ ಮಧ್ಯಪ್ರಾಚ್ಯ ದೇಶಗಳತ್ತ ಮುಖ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!