ಚಳಿಗಾಲದಿಂದ ರಕ್ಷಿಸಿಕೊಳ್ಳಲು ತೇಲುವ ಅನಿಲ ಘಟಕಗಳ ಖರೀದಿಗೆ ಮುಂದಾದ ಯುರೋಪಿಯನ್‌ ರಾಷ್ಟ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಆಕ್ರಮಣದ ನಂತರ ರಷ್ಯಾ ಹಾಗೂ ಯುರೋಪಿಯನ್‌ ರಾಷ್ಟ್ರಗಳ ತೈಲ ಸಮರದ ನಡುವೆ ರಷ್ಯಾ ಅನಿಲ ಪೂರೈಕೆಗೆ ಪರ್ಯಾಯವಾಗಿ ಪಾಶ್ಚಾತ್ಯ ರಾಷ್ಟ್ರಗಳು ಶೀಘ್ರ ಪರಿಹಾರ ಕಂಡುಕೊಂಡಿದ್ದು ತೇಲುವ ಅನಿಲ ಘಟಕಗಳ ಮೊರೆ ಹೋಗಿವೆ.

ಸಾಮಾನ್ಯವಾಗಿ ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆ ಕ್ಯಾರಿಯರ್‌ ಗಳು ಪೂರೈಕೆದಾರರರಿಂದ ಅನಿಲವನ್ನು ತಂದು ತೀರದಲ್ಲಿರುವ ಸುರಂಗಮಾರ್ಗಗಳ ಮೂಲಕ ತಲುಪಿಸುತ್ತವೆ. ಇವುಗಳನ್ನು ನಿರ್ಮಿಸಲು ವರ್ಷಗಳ ಸಮಯ ಬೇಕಾಗುತ್ತದೆ. ಚಳಿಗಾಲ ಎದರುರಾಗಿರುವುದರಿಂದ ಶೀಘ್ರಪರಿಹಾರದ ಮಾರ್ಗವಾಗಿ ತೇಲುವ ಅನಿಲ ಘಟಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಹೀಗಾಗಿ ನೆದರ್‌ಲ್ಯಾಂಡ್ಸ್ ಮತ್ತು ಜರ್ಮನಿ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳು ತೇಲುವ ಶೇಖರಣಾ ರೀಗ್ಯಾಸಿಫಿಕೇಶನ್ ಯೂನಿಟ್‌ಗಳನ್ನು (ಎಫ್‌ಎಸ್‌ಆರ್‌ಯು) ಆಶ್ರಯಿಸುತ್ತಿವೆ. ಎಫ್‌ಎಸ್‌ಆರ್‌ಯುಗಳೆಂದರೆ ಅನಿಲ ಪೂರೈಕೆ ಮಾಡಬಹುದಾದ ಹಡಗುಗಳಾಗಿವೆ. ಪ್ರಸ್ತುತ ಇಂತಹ ಹಡಗುಗಳನ್ನು ಖರೀದಿಸಲು ಯುರೋಪಿಯನ್‌ ರಾಷ್ಟ್ರಗಳು ಮುಂದಾಗಿವೆ.

FSRU ಗಳ ಬೇಡಿಕೆ ಹೆಚ್ಚಾಗುತ್ತಿದೆ ಅವುಗಳ ಎಂದು ಪೂರೈಕೆದಾರರು ಹೇಳಿದ್ದಾರೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ನಂತರ ಬೇಡಿಕೆ ಹೆಚ್ಚಾಗಿದ್ದು ಯುರೋಪಿಯನ್ ರಾಷ್ಟ್ರಗಳು ಕನಿಷ್ಠ 25 FSRU ಗಳನ್ನು ಗುತ್ತಿಗೆ ಪಡೆದಿವೆ.

FSRUಗಳನ್ನು ತಯಾರಿಸುವ ಮತ್ತು ಸ್ಥಾಪಿಸುವ Exmar, ಸಾಮಾನ್ಯವಾಗಿ ವರ್ಷಕ್ಕೆ ಒಂದರಿಂದ ಮೂರು ಯೋಜನೆಗಳನ್ನು ಮಾತ್ರ ನಿರ್ವಹಿಸುತ್ತದೆ. ಆದರೆ ಕಳೆದ ಆರು ತಿಂಗಳ ಅವಧಿಯಲ್ಲಿ ಹತ್ತು ಎಫ್‌ಎಸ್‌ಆರ್‌ಯುಗಳು ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!