CINI | ನಾಳೆ ಬಿಡುಗಡೆಗೊಳ್ಳಲಿದೆ ಮಹಿಳಾ ಪ್ರಧಾನ ಸಿನಿಮಾ ‘ಮೀರಾ’! ಇದರ ವಿಶೇಷತೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುಳು ಚಿತ್ರರಂಗದಲ್ಲಿ ವಿಶೇಷ ರೀತಿಯ ಸಿನಿಮಾವೊಂದು ಬಿಡುಗಡೆಗೊಳ್ಳಲಿದೆ. ಹೌದು ಮಹಿಳಾ ಪ್ರಧಾನ ಕಥೆಯಾಧಾರಿತ ‘ಮೀರಾ’ ಎನ್ನುವ ಸಿನಿಮಾ ತೆರೆ ಏರಲು ಸಿದ್ಧಗೊಂಡಿದ್ದು,ತುಳು‌ ಸಿನಿಮಾ‌ ರಂಗದಲ್ಲಿ ಹೊಸ‌ ಪ್ರಯೋಗಕ್ಕೆ ಈ ಚಿತ್ರ ನಾಂದಿ‌ ಹಾಡಿದೆ.

ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ರೇಜ್ನು ಜಯಪ್ರಕಾಶ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ AI ನಿಂದ ನಿರ್ಮಿತ ಹಾಡನ್ನೂಸಹ ಜೋಡಿಸಲಾಗಿದೆ‌. ಇದು ಈ ಸಿನಿಮಾದ ವಿಶೇಷತೆ ಎಂದೇ ಹೇಳಬಹುದು.

ಮಂಗಳೂರಿನಲ್ಲಿ ಈಗಾಗಲೇ ಈ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಚಿತ್ರ ಪ್ರೇಕ್ಷಕರಿಂದ ಚಿತ್ರದ ಪರವಾಗಿ ಉತ್ತಮ ಪ್ರತಿಕ್ರಿಯೆಗಳೂ ಬಂದಿವೆ.

ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಇತಿತಾ ಶೆಟ್ಟಿ, ಲಕ್ಷ್ಯಾ ಗಮನಸೆಳೆಯಲಿದ್ದು, ಲಂಚುಲಾಲ್.ಕೆ.ಎಸ್ ಮೀರಾ ಚಿತ್ರದ ನಿರ್ಮಾಪಕರಾಗಿದ್ದು, ಕೇರಳ ಮೂಲದ ಅಶ್ವತ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಅಸಿಸ್ಟೆಂಟ್ ಕ್ಯಾಮಾರಾಮ್ಯಾನ್ ಆಗಿದ್ದ ಅಜಯ್ ಈ ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!