September 26, 2026
Saturday, September 26, 2026
spot_img

ʼಸಿಎಂ ಆದ್ಮೇಲೂ ಬ್ಲೂಫಿಲಂ ಮಾಡಿಸೋದು, ಪೋಸ್ಟರ್‌ ಅಂಟ್ಸೋದು ನಿಲ್ಸಿಲ್ಲ! ನನ್ನ ಹೆಂಡ್ತಿ ಫೋಟೊ ಹಾಕಿ ಪ್ರಚಾರ ಮಾಡ್ತಾರೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಳ್ಳು ಪೋಸ್ಟರ್‌ಗಳಿಗೆಲ್ಲ ಬೆದರೋ ಮಾತೇ ಇಲ್ಲ. ಸಿಎಂ ಆದ್ಮೇಲಾದ್ರೂ ಬ್ಲೂ ಫಿಲಂ ಮಾಡಿಸೋದು, ಫೋಟೊ ಅಂಟಿಸೋದು ಬಿಡ್ತಾರೆ ಅಂದ್ಕೊಂಡಿದ್ದೆ. ಆದರೆ ನನ್ನ ಹೆಂಡ್ತಿ ಫೋಟೊ ಹಾಕ್ಕೊಂಡು ಪ್ರಚಾರ ಮಾಡ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ.

ಬಿಡದಿಯಲ್ಲಿ ಟೌನ್‌ಶಿಪ್‌ ನಿರ್ಮಾಣಕ್ಕೆ ರೈತರು ಬೇಡ ಅಂತಿದ್ದಾರೆ. ಈ ನಿರ್ಧಾರವನ್ನು ಜೆಡಿಎಸ್‌ ಬೆಂಬಲಿಸಿದ್ದು, ರೈತರ ಜೊತೆ ಸೇರಿಕೊಂಡು ಟೌನ್‌ಶಿಪ್‌ನ್ನು ವಿರೋಧಿಸ್ತಿದ್ದಾರೆ. ಇತ್ತ ಕಾಂಗ್ರೆಸ್‌ ಎಚ್‌ಡಿಕೆ ಹಾಗೂ ಅವರ ಇಡೀ ಕುಟುಂಬದ ಫೋಟೊ ಹಾಕಿ ಪೋಸ್ಟರ್‌ ಮಾಡಿಸಿದ್ದಾರೆ.

ಪೋಸ್ಟರ್ ಅಂಟಿಸಿ ಪ್ರಚಾರ ಮಾಡೋದಾ? ನನ್ನದು ಬಿಡಿ, ನನ್ನ ಹೆಂಡತಿಯದ್ದೂ ಫೋಟೋ ಹಾಕಿದ್ದಾರೆ. 100 ಎಕರೆ ಅಂತ ಪೋಸ್ಟರ್ ಅಂತ ನಂದು ನಿಖಿಲ್‌ ಫೋಟೋ ಹಾಕಿದ್ದಾರೆ. 46 ಎಕರೆ 40 ವರ್ಷದ ಹಿಂದೆ ಕಷ್ಟ ಪಟ್ಟು ಖರೀದಿ ಮಾಡಿರೋ ಜಮೀನು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇದೆ. 100 ಎಕರೆ ಅಂತ ಪೋಸ್ಟರ್ ಹಾಕಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ತಗೊಂಡಿದ್ದಾರೆ. ಅದು ಖರೀದಿ ಮಾಡಿರೋದು. ಖರೀದಿ ಮಾಡಿರೋದನ್ನ ಯಾವನೋ ಹೆಸರಿನಲ್ಲಿ ಪೋಸ್ಟರ್ ಹಾಕಿ ಕೊಡಿ ಅಂದರೆ ಹೇಗೆ ಎಂದು ಪ್ರಶ್ನಿಸಿದರು.

ಬೆನ್ನಗಾನಹಳ್ಳಿಯಲ್ಲಿ ಸತ್ತೋಗಿರುವವರ ಹೆಸರಿನಲ್ಲಿ ಈ ವ್ಯಕ್ತಿ ಜಮೀನು ತಗೊಂಡಿದಾರೆ, ಅದನ್ನೆಲ್ಲಾ ಪೋಸ್ಟರ್‌ನಲ್ಲಿ ಹಾಕಿಸ್ಬೇಕಿತ್ತು. ಈಗಿನ ಕಾಲದಲ್ಲೂ ಪೋಸ್ಟರ್‌ ಹಾಕಿದ್ರೆ ಜನ ನಂಬ್ತಾರಾ? ಸಿಎಂ ಆದ್ಮೇಲಾದ್ರೂ ಒಂದು ಸ್ಟಾಂಡರ್ಡ್‌ ಬೇಡ್ವಾ? ಅವರ ಖುರ್ಚಿಗೆ ಇದು ಶೋಭೆ ತರುತ್ತಾ? ಡಿಕೆ ಶಿವಕುಮಾರ್‌ ಅವರದ್ದು ವಿಕೃತ ಮನಸ್ಸು. ಮೊದಲಿನಿಂದಲೂ ಅವರು ಹಾಗೆಯೇ, ಇಂಥ ವ್ಯಕ್ತಿ ಸಿಎಂ ಆದ್ಮೇಲೆ ಬದಲಾಗ್ತಾರೆ ಅಂತ ಅಂದ್ಕೊಂಡಿದ್ದು ನಮ್ಮ ತಪ್ಪು ಎಂದಿದ್ದಾರೆ.

Must Read