ಮಕ್ಕಳು ಕೆಲವೊಮ್ಮೆ ಬೇಗ ಮಲಗ್ತಾರೆ ಆದರೆ ಪೋಷಕರು ಸುಸ್ತಾಗಿ ಬೇಗ ಮಲಗಬೇಕು ಎಂದುಕೊಂಡಾಗಲೇ ಮಲಗೋದಿಲ್ಲ. ಗಂಟೆಗಟ್ಟಲೆ ಆಟಾಡ್ತಾ ಕೂರ‍್ತಾರೆ, ಮಕ್ಕಳನ್ನು ಮಲಗಿಸೋಕೆ ಹೀಗೆ ಮಾಡಿ..
- ಮಕ್ಕಳು ಮಲಗುವ ಮುನ್ನ ಅವರಿಗೆ ಎಣ್ಣೆಯ ಮಾಲಿಶ್ ಮಾಡಿ, ಮೈ ಕೈ ಚೆನ್ನಾಗಿ ಒತ್ತಿ ಇದರಿಂದ ಸುಸ್ತಾಗಿ ಬೇಗ ಮಲಗ್ತಾರೆ.
- ಇನ್ನು ಮಕ್ಕಳಿಗೆ ಜೋಲಿಯಲ್ಲಿ ಹಾಕಿ ತೂಗಿ ಮಲಗಿಸುವುದು ಬೆಸ್ಟ್ ವಿಧಾನ, ಸ್ವಲ್ಪ ಹೊತ್ತು ಆಟ ಆಡಿದ್ರೂ ಬೋರ್ ಆಗಿ ಮಲಗಿಬಿಡ್ತಾರೆ.
- ಮಕ್ಕಳಿಗೆ ಹಾಲು ಕುಡಿಸಿದರೆ ಅವರಿಗೆ ಚೆನ್ನಾಗಿ ನಿದ್ದೆ ಬರುತ್ತದೆ. ರಾತ್ರಿ ಸಮಯ ಫೀಡಿಂಗ್ ಮಾಡಿಸಿ ಮಲಗಿಸಿ
- ರೂಮ್ ಕತ್ತಲಾಗಿರಲಿ, ಸಣ್ಣ ಲಾಲಿಹಾಡು ಬರುತ್ತಿರಲಿ. ಮಕ್ಕಳಿಗೆ ಮಲಗುವ ಎರಡು ಗಂಟೆ ಮುನ್ನ ಟಿವಿ, ಫೋನ್ ತೋರಿಸಬೇಡಿ.
- ಹಗಲು ಹೊತ್ತಿನಲ್ಲಿ ಮಕ್ಕಳನ್ನು ಆಟ ಆಡಲು ಬಿಡಿ, ದಣಿವಾಗಿ ರಾತ್ರಿ ಬೇಗ ಮಲಗುತ್ತಾರೆ.