ಸಾಂಬಾರಿನಲ್ಲಿ ಹುಳಿ ಹೆಚ್ಚಿಸೋಕೆ ಟೊಮ್ಯಾಟೋ ಬದಲಿಗೆ ಈ ವಸ್ತುಗಳನ್ನು ಬಳಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರುಚಿ ರುಚಿಯಾದ ಸಾಂಬಾರು ಮಾಡ್ಬೇಕು ಜೊತೆಗೆ ನಾಲಿಗೆಗೆ ಹುಳಿಯ ರುಚಿಯೂ ಬೇಕು, ಆದರೆ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ ಅಂತ ಚಿಂತಿಸ್ತಿದೀರಾ ಹಾಗಾದ್ರೆ ಸಾಂಬಾರಿಗೆ ಈ ವಸ್ತುಗಳನ್ನು ಬಳಸಿ ಹುಳಿ ಅಂಶವನ್ನು ಸೇರಿಸಬಹುದು. ಹಾಗಾದ್ರೆ ಯಾವೆಲ್ಲಾ ವಸ್ತುಗಳನ್ನು ಬಳಕೆ ಮಾಡ್ಬಹುದು ಅನ್ನೋದನ್ನು ಇಲ್ಲಿ ತಿಳಿಯೋಣ.

* ಟೊಮ್ಯಾಟೋ ಬದಲಾಗಿ ಮಾವಿನಕಾಯಿ ಪುಡಿಯನ್ನು ಸಾಂಬಾರು ಅಥವಾ ಪಲ್ಯಗಳಿಗೆ ಬಳಕೆ ಮಾಡಬಹುದು.

* ಟೊಮ್ಯಾಟೋಗಿಂತಲೂ ಹುಣಸೆ ಹಣ್ಣು ಹೆಚ್ಚು ಹುಳಿಯಾಗಿ ಇರೋದ್ರಿಂದ ಸ್ವಲ್ಪ ಹುಣಸೆ ಹಣ್ಣನ್ನು ಪದಾರ್ಥಕ್ಕೆ ಸೇರಿಸಬಹುದು.

* ನೆಲ್ಲಿಕಾಯಿ ಕೂಡ ಹುಳಿ ಅಂಶವನ್ನು ಹೊಂದಿದೆ. ಹಾಗಾಗಿ ಅದನ್ನು ಕೂಡ ಬಳಸಬಹುದು.

* ಕೆಲವು ಅಡುಗೆಗಳಿಗೆ ಮೊಸರು ಬಳಕೆ ಮಾಡುವುದರಿಂದ ಹುಳಿ ಅಂಶವನ್ನು ನೀಡುತ್ತದೆ.

* ವಿನೆಗರ್ ಅನ್ನು ಬಳಕೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!