ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕುಸಿದರೂ ಚಿಲ್ಲರೆ ಮಾರಾಟದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗೋದು ಡೌಟ್ !‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಗಣನೀಯ ಕುಸಿತವುಂಟಾಗಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಕಳೆದ ಏಳು ತಿಂಗಳಲ್ಲಿ ಅತ್ಯಂತ ಕನಿಷ್ಠ ಮಟ್ಟ ತಲುಪಿವೆ. ಆದರೆ ತೈಲ ಮಾರುಕಟ್ಟೆಗಳು ಇನ್ನೂ ಅಸ್ಥಿರವಾಗಿರುವುದರಿಂದ ಚಿಲ್ಲರೇ ಮಾರಾಟದಲ್ಲಿ ಪೆಟ್ರೋಲ್‌ ಬೆಲೆಗಳಲ್ಲಿ ಯಾವುದೇ ಇಳಿಕೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾಗಾರಗಳು ಸುಮಾರು ₹18,500 ಕೋಟಿಗಳಷ್ಟು ನಷ್ಟವನ್ನು ಹೊಂದಿದ್ದು ಅವುಗಳನ್ನು ಸರಿದೂಗಿಸಬೇಕೆಂದರೆ ಈ ಕ್ರಮ ಅಗತ್ಯವಾಗಿದೆ.

ಆದರೆ ಸರ್ಕಾರವು ಮುಂದಿನ ವಾರ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳನ್ನು ಪರಿಶೀಲಿಸುತ್ತದೆ ಮತ್ತು ಈ ಉತ್ಪನ್ನಗಳ ದಿಢೀರ್‌ ಲಾಭದ ಮೇಲಿನ ತೆರಿಗೆಯನ್ನು ಅವುಗಳ ಮಾರುಕಟ್ಟೆ ದರಗಳೊಂದಿಗೆ ಹೊಂದಿಸಲು ಪ್ರಯತ್ನಿಸಲಿದೆ ಎನ್ನಲಾಗುತ್ತಿದೆ.

ಅಂತಾರಾಷ್ಟ್ರೀಯ ತೈಲ ಬೆಲೆಗಳು ಅಸ್ಥಿರವಾಗಿದ್ದು ತೈಲ ಬೆಲೆಯ ಬೆಂಚ್‌ ಮಾರ್ಕ್‌ ಆಗಿರುವ ಬ್ರೆಂಟ್ ಬ್ಯಾರೆಲ್‌ಗೆ 88 ಡಾಲರ್‌ ಗೆ ಇಳಿದಿದೆ ಇದು ಕಳೆದ ಏಳು ತಿಂಗಳಲ್ಲೇ ಅತ್ಯಂತ ಕನಿಷ್ಠವಾಗಿದೆ.

ಕೆಲ ವರದಿಗಳ ಪ್ರಕಾರ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಡೀಸೆಲ್‌ನಲ್ಲಿ ಪ್ರತಿ ಲೀಟರ್‌ಗೆ ಸುಮಾರು ₹ 5-6 ನಷ್ಟವನ್ನು ಅನುಭವಿಸುತ್ತಿವೆ ಆದರೆ ಪೆಟ್ರೋಲ್‌ನಲ್ಲಿ ಯಾವುದೇ ಆದಾಯ ನಷ್ಟವಿಲ್ಲ. ವಾಸ್ತವವಾಗಿ, ಕಂಪನಿಗಳು ಪೆಟ್ರೋಲ್‌ನ ಚಿಲ್ಲರೆ ಬೆಲೆಯಲ್ಲಿ ಲೀಟರ್‌ಗೆ ಸುಮಾರು ₹2-3 ಮಾರ್ಜಿನ್ ಮಾಡುತ್ತಿವೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!