ಮೇಘನಾ ಶೆಟ್ಟಿ, ಶಿವಮೊಗ್ಗ
ಮೈಕೈ ನೋವು ಡಾಕ್ಟರ್ ಹತ್ರ ಹೋಗಬೇಕು, ಎದೆ ಉರಿ ಅನಿಸ್ತಿದೆ ಡಾಕ್ಟರ್ ಹತ್ರ ಹೋಗ್ಬೇಕು, ಜ್ವರ ಎರಡು ದಿನ ಆದ್ರೂ ನಿಂತಿಲ್ಲ ಡಾಕ್ಟರ್ ಕಾಣ್ಬೇಕು… ದೇಹಕ್ಕೆ ಸ್ವಲ್ಪ ಏನಾದ್ರೂ ನಿಮಗೆ ಎಷ್ಟೊಂದು ಕಾಳಜಿ ಅಲ್ವಾ? ತಕ್ಷಣ ವೈದ್ಯರನ್ನು ಭೇಟಿ ಮಾಡಿ ಸರಿ ಮಾಡಿಕೊಳ್ತೀರಿ, ಆದರೆ ಮನಸ್ಸಿಗೆ ಅರಾಮಿಲ್ಲ ಅಂದ್ರೆ? ನೀರು ಕುಡಿದ್ರೆ ಸರಿ ಹೋಗತ್ತೆ, ಟ್ರಿಪ್ ಹೋಗ್ಬಂದ್ರೆ ಸರಿ ಹೋಗತ್ತೆ, ಮಲಗಿ ಎದ್ರೆ ಸರಿ ಹೋಗತ್ತೆ ಅಂತ ಸುಮ್ಮನಾಗಿಬಿಡ್ತೀರಿ!
ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಕನೆಕ್ಟೆಡ್ ಅನ್ನೋದನ್ನು ಆದಷ್ಟು ಬೇಗ ಅರಿತುಕೊಳ್ಳಿ.. ಮನಸ್ಸು ಖುಷಿಯಾಗಿದ್ರೆ ದೇಹಕ್ಕೆ ಆರೋಗ್ಯ, ದೇಹ ಚೆನ್ನಾಗಿ ನೋಡಿಕೊಂಡ್ರೆ ಮನಸ್ಸಿಗೆ ಖುಷಿ..
ಮಾನಸಿಕ ಆರೋಗ್ಯ ಸರಿ ಇಲ್ಲವಾದ್ರೆ ಅದನ್ನು ಸರಿಮಾಡಿಕೊಳ್ಳಿ, ಮನೋವೈದ್ಯರನ್ನು ಕಾಣೋರೆಲ್ಲ ಹುಚ್ಚರಲ್ಲ!!
ಈ ಲಕ್ಷಣಗಳು ನಿಮ್ಮಲ್ಲೂ ಇದ್ದರೆ ಮನೋವೈದ್ಯರನ್ನು ಭೇಟಿ ಮಾಡಿ..
ನಿಮ್ಮ ನಿದ್ದೆಯ ಪ್ಯಾಟರ್ನ್ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ತುಂಬಾನೇ ಹೇಳತ್ತೆ. ನಿದ್ದೆ ಸರಿಯಾಗಿ ಬಾರದಿದ್ರೆ, ಪದೇ ಪದೆ ಎಚ್ಚರವಾದ್ರೆ, ರಾತ್ರಿಯಿಡೀ ನಿದ್ದೆ ಮಾಡದೇ ಇದ್ರೆ ಮನೋವೈದ್ಯರನ್ನು ಭೇಟಿ ಮಾಡಿ.
ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ರೂ ಆಫೀಸ್‌ನಲ್ಲಿ ಪ್ರೊಗ್ರೆಸ್ ಕಾಣಿಸ್ತಾ ಇಲ್ಲ, ಆಗಾಗ ಡೆಡ್‌ಲೈನ್ಸ್ ಮಿಸ್ ಮಾಡ್ತೀರಿ, ಏಕಾಗ್ರತೆ ಇಲ್ಲ, ಪದೆ ಪದೆ ಸೀನಿಯರ‍್ಸ್ ಹತ್ರ ಬೈಸ್ಕೊಳ್ತೀರಿ ಎಂದಾದರೆ ವೈದ್ಯರನ್ನು ಭೇಟಿ ಮಾಡಿ.
ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳೋಕೆ ಆಗದೇ ಹೋದ್ರೆ ಮೊದಲು ವೈದ್ಯರನ್ನು ಭೇಟಿ ಮಾಡಿ, ಯಾವುದೋ ಸಂದರ್ಭದಲ್ಲಿ ಹೇಗೋ ರಿಯಾಕ್ಟ್ ಮಾಡೋದು, ಓವರ್ ರಿಯಾಕ್ಟ್ ಮಾಡೋದು, ಜನರನ್ನು ನಂಬದೇ ಇರೋದು, ಜೀವನ ಕಷ್ಟ ಎನಿಸೋಕೆ ಶುರುವಾಗೋದು ಸಮಸ್ಯೆಯೇ.
ಕೆಲವರಿಗೆ ಮನಸ್ಸಿಗೆ ನೋವಾದ್ರೆ ತಿನ್ನೋಕೆ ಆಗೋದಿಲ್ಲ, ಊಟ ತಿಂಡಿ ಹಿಡಿಸೋದಿಲ್ಲ. ಹಲವರಿಗೆ ಉಲ್ಟಾ ಅತಿಯಾಗಿ ತಿನ್ನೋಣ ಎನಿಸುತ್ತದೆ. ಹಸಿವಿರಲಿ ಬಿಡಲಿ ಸಿಕ್ಕಿದ್ದೆಲ್ಲಾ ತಿನ್ನೋದು, ಡ್ರಗ್ಸ್ ಬಗ್ಗೆ ಆಲೋಚನೆ ಮಾಡೋದು, ಮದ್ಯಪಾನಕ್ಕೆ ದಾಸರಾಗೋದು, ಸಿಗರೇಟ್ ರೂಢಿ ಮಾಡೋದು.. ಹೀಗೆ ಅನ್ನಿಸಿದ ತಕ್ಷಣ ವೈದ್ಯರ ಬಳಿ ಮಾತನಾಡಿ.
ನಾನು ಯೂಸ್‌ಲೆಸ್, ಯಾವ ಕೆಲಸವೂ ನನ್ನಿಂದ ಆಗೋದಿಲ್ಲ, ಹಾಲು ತರೋಕೆ ಹೋದವರಿಗೆ ಹಾಲಿನ ಜೊತೆ ಕಾಫಿ ಪುಡಿ ತರಬೇಕೆಂದು ನೆನಪಾಗೋದಿಲ್ಲ. ನಾನು ಯಾವ ಕೆಲಸಕ್ಕೆ ಕೈ ಹಾಕಿದ್ರೂ ಹಾಳಾಗುತ್ತದೆ. ನನ್ನನ್ನು ಯಾರೂ ಪ್ರೀತಿಸೋದಿಲ್ಲ. ನಾನು ಬದುಕಿರೋದೇ ವೇಸ್ಟ್ ಹೀಗೆಲ್ಲಾ ಅನಿಸಬಾರದು, ಅನಿಸಿದ್ರೆ ವೈದ್ಯರನ್ನು ಭೇಟಿ ಮಾಡಿ.
ಸಹಾಯ ಕೇಳಿದವರೆಲ್ಲ ಕೈಲಾಗದವರಲ್ಲ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಬದುಕುವುದೇ ಜೀವನ, ವೈದ್ಯರು ನಿಮಗೆ ಸಹಾಯ ಮಾಡ್ತಿದ್ದಾರೆ ಎಂದುಕೊಳ್ಳಿ. ಕೆಲವರಿಗೆ ಈ ಲಕ್ಷಣಗಳು ಬಂದು ಹೋಗಬಹುದು, ಯಾವಾಗ ಈ ಲಕ್ಷಣಗಳು ಗಂಭೀರ ಸ್ವರೂಪ ಪಡೆದಿದೆ ಎನಿಸುತ್ತದೆಯೋ ಆಗ ತಪ್ಪದೇ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ..