ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಹಮಾಸ್ ಬಂದೂಕುಧಾರಿಗಳು ನಡೆಸಿದ ಅತ್ಯಂತ ಕ್ರೂರ ಹತ್ಯಾಕಾಂಡದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿ ದಾಖಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸೇನೆ ಪ್ಯಾಲೆಸ್ತೀನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿದ್ದು, 1,500ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಇಸ್ರೇಲ್ ಸೇನೆ ಗಾಜಾ ಗಡಿಯಲ್ಲಿ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ಭಾರಿ ನಾಶವನ್ನು ಉಂಟುಮಾಡಿದೆ. ಇದು ಹಮಾಸ್‌ಗೆ ಸೇರಿದ 475 ರಾಕೆಟ್ ವ್ಯವಸ್ಥೆಗಳು ಮತ್ತು 73 ಕಮಾಂಡ್ ಸೆಂಟರ್‌ಗಳು ಪೀಸ್ ಪೀಸ್ ಆಗಿವೆ. ಈ ನಡುವೆ, ಇಸ್ರೇಲ್ ಗಡಿ ಪ್ರವೇಶಿಸಿದ 1,500 ಹಮಾಸ್ ಉಗ್ರರನ್ನು ಕೊಲ್ಲಲಾಗಿದೆ. ಇಸ್ರೇಲ್ ಪ್ರಾಂತ್ಯದಲ್ಲಿ ಸುಮಾರು 1,500 ಜನರು ಪ್ಯಾಲೆಸ್ತೀನ್ ಬಂದೂಕುಧಾರಿಗಳ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಇಸ್ರೇಲಿ ಟಿವಿ ಚಾನೆಲ್ 13 ನ್ಯೂಸ್ ವರದಿ ಮಾಡಿದೆ.