ಮೋದಿ ಮೋಡಿಗೆ ಇಲ್ಲಿ -40 ಡಿಗ್ರಿ ಚಳಿಯಲ್ಲೂ ಝಳು ಝಳುನೆ ಹರಿಯುತ್ತಿದೆ ನಲ್ಲಿ ನೀರು!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರವೊಂದು ಮನಸ್ಸು ಮಾಡಿದರೆ, ನೀರು ಎಸೆದರೂ ಮಂಜು ಪುಡಿಯಾಗಿ ಉದುರುವ -೪೦ ಡಿಗ್ರಿ ಚಳಿಯಲ್ಲೂ ನೀರನ್ನೇ ಸರಬರಾಜು ಮಾಡಿ, ಜನರ ಜೀವನ ಹಸನಾಗಿಸಬಹುದು ಎಂಬುದಕ್ಕೆ ಮೋದಿ ಸರ್ಕಾರವೇ ಸಾಕ್ಷಿ.

ಸರ್ಕಾರದ ಜಲ ಜೀವನ್ ಮಿಷನ್ ಅನ್ವಯ, ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಇರುವ ಲೇಹ್ ಜಿಯ 13,800 ಅಡಿ ಎತ್ತರದಲ್ಲಿರುವ ಡೆಮ್ಚೋಕ್ ಗ್ರಾಮಕ್ಕೆ ಈಗ ನಲ್ಲಿ ನೀರು ತಲುಪಿದೆ. ಅಂದರೆ 325 ಕಿಲೋಮೀಟರ್ ದೂರದಲ್ಲಿರುವ ಲೇಹ್ ನಗರದಿಂದ ಗ್ರಾಮದ 438 ಮನೆಗಳಿಗೆ ನಲ್ಲಿ ನೀರು ಲಭ್ಯವಾಗಿದೆ.

ಹಳ್ಳಿಯು ಸಾಕ್ಷಿಯಾಗಿರುವ ಅತ್ಯಂತ ಶೀತ ತಾಪಮಾನವನ್ನು ಪರಿಗಣಿಸಿ ಆಡಳಿತವು 8 ಸೋಲಾರ್ ಸಬ್ಮರ್ಸಿಬಲ್ ಪಂಪ್‌ಗಳನ್ನು ಸ್ಥಾಪಿಸಿದ್ದು, ವಿಶೇಷವಾಗಿ ಗ್ರಾಮವನ್ನು ತಲುಪುವ ಪೈಪ್‌ಗಳು ಇನ್ಸುಲೇಟೆಡ್ ಆಗಿ ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವುದಿಲ್ಲ.
ಇದಲ್ಲದೇ ಇಲ್ಲಿಯವರೆಗೆ, ಲೇಹ್ ಜಿಯಾದ್ಯಂತ 11,000 ನಲ್ಲಿಗಳನ್ನು ಸ್ಥಾಪಿಸಲಾಗಿದ್ದು, ಇದು 47%ರಷ್ಟು ಶುದ್ಧತ್ವವನ್ನು ನೀಡಬಲ್ಲದ್ದಾಗಿದೆ. ಅಲ್ಲಿ ಸರ್ಕಾರದ ವ್ಯವಸ್ಥೆ ತಲುಪಿಸುವುದು ಸುಲಭದ ಮಾತಲ್ಲ. ಏಕೆಂದರೆ, ಪರ್ವತ ಭೌಗೋಳಿಕತೆ, ಪ್ರತ್ಯೇಕವಾದ ವಾಸಸ್ಥಳಗಳು, ರಸ್ತೆಯೇ ಇಲ್ಲದ ಪ್ರದೇಶಗಳು, ಹವಾಮಾನ ವೈಪರೀತ್ಯ, ತಾಪಮಾನವು -40 ಡಿಗ್ರಿಗೆ ಇಳಿಯುವುದು ಮತ್ತು ಹಿಮದಿಂದ ಮುಚ್ಚಿಹೋಗುವ ರಸ್ತೆಗಳನ್ನು ನೋಡಿದರೆ, ಇದು ಗಮನಾರ್ಹ ಸಾಧನೆಯೇ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!