ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಕುಲವನ್ನೇ ಕಂಗಾಲಾಗಿದ್ದ ಕೋವಿಡ್ ಚಂದ್ರನ ಮೇಲೂ ತನ್ನ ಪ್ರಭಾವ ಬೀರಿತ್ತು ಎಂಬ ಶಾಕಿಂಗ್ ಮಾಹಿತಿಯನ್ನು ವೆಸ್ಟ್ ಇಂಡೀಸ್‌ನ ಮಿಸ್ಸೋರಿ ಎಸ್ ಎಂಡ್ ಟಿ ವಿಶ್ವವಿದ್ಯಾಲಯ ತನ್ನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಏಪ್ರಿಲ್ 2020ರಿಂದ ವಿಶ್ವದ ಬಹುತೇಕ ದೇಶಗಳು ಲಾಕ್‌ಡೌನ್ ಆಗಿದ್ದವು. ಮೊದಲ ಬಾರಿಗೆ ಭೂಮಿಯ ಬಹುತೇಕ ಚಟುವಟಿಕೆ, ಕಾರ್ಖಾನೆ, ವಾಹನ ಓಡಾಟ ಎಲ್ಲವೂ ಸ್ಥಬ್ಧಗೊಂಡಿತ್ತು. ಬಳಿಕ ಮೇ, ಜೂನ್, ಹೀಗೆ ಲಾಕ್‌ಡೌನ್ ಮುಂದುವರಿಯುತ್ತಲೇ ಹೋಗಿತ್ತು. ಭೂಮಿಯಲ್ಲಿ ಏಕಾಏಕಿ ಚಟುವಟಿಕೆ ನಿಂತ ಕಾರಣ ಮಾಲಿನ್ಯ, ಜಾಗತಿಕ ತಾಪಮಾನ ಕಡಿಮೆಯಾಗಿತ್ತು. ಇದರ ಪರಿಣಾಮ ಚಂದ್ರನ ಮೇಲೂ ಆಗಿದೆ ಎಂದು ಈ ಅಧ್ಯಯನ ವರದಿ ಹೇಳಿದೆ.
2020ರ ಎಪ್ರಿಲ್- ಮೇ ತಿಂಗಳಿನಲ್ಲಿ ಚಂದ್ರನ ಮೇಲಿನ ತಾಪಮಾನ ಮತ್ತಷ್ಟು ಇಳಿಕೆಯಾಗಿತ್ತು. ಲಾಕ್‌ಡೌನ್ ತೆರವಾಗುತ್ತಿದ್ದಂತೆ ಚಂದ್ರನ ಮೇಲಿನ ತಾಪಮಾನ ಮತ್ತೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. 2017ರಿಂದ 2023ರ ವರೆಗೆ ಚಂದ್ರನ ಮೇಲಿನ ತಾಪಮಾನ ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ.
ಭೂಮಿಯ ತಾಪಮಾನ ವೈಪರೀತ್ಯಗಳು ಚಂದ್ರನ ಮೇಲೆ ಪ್ರಭಾವ ಬೀರುತ್ತದೆ ಎಂಬುದು ನಿಜವಾದರೆ, ಇದು ಸೂರ್ಯ ಸೇರಿದಂತೆ ಇತರ ಗ್ರಹಗಳ ಮೇಲೆ ಕೂಡಾ ಇದೇ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಈ ಬಗ್ಗೆಯೂ ಅಧ್ಯಯನ ಮುಂದುವರಿದಿದೆ.