ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ದಶಕದ ಜನಸಂಖ್ಯೆಯ ಬೆಳವಣಿಗೆ ದರವು 4.9 ಶೇಕಡಾ ಆಗಿದೆ ಎಂದು ಬಜೆಟ್‌ಗೂ ಮುನ್ನ ವಿಧಾನಸಭೆಯಲ್ಲಿ ಮಂಡಿಸಲಾದ ಆರ್ಥಿಕ ಪರಿಶೀಲನಾ ವರದಿ ಹೇಳಿದ್ದು, ಕೇರಳವು ದೇಶದಲ್ಲೇ ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ರಾಜ್ಯವಾಗಿದೆ ಎಂದು ಉಲ್ಲೇಖ ಮಾಡಿದೆ.
ಕೇರಳದಲ್ಲಿ ಅತೀ ಹೆಚ್ಚು ಜನಸಂಖ್ಯೆ ಬೆಳವಣಿಗೆ ದರ ಮಲಪ್ಪುರಂ ಜಿಲ್ಲೆಯಲ್ಲಿದ್ದು, ಇದು ಶೇ. 13.4 ಆಗಿದೆ. ಕಾಸರಗೋಡು ಎರಡನೇ ಸ್ಥಾನ ಪಡೆದುಕೊಂಡಿದ್ದು, ಇಲ್ಲಿ ಶೇ. 8.6ದಾಖಲಾಗಿದೆ. ಇನ್ನು ಕೋಝಿಕ್ಕೋಡ್ 7.2%, ಪಾಲಕ್ಕಾಡ್ 7.4% ದರ ಹೊಂದಿದೆ ಎಂದು ವರದಿ ಹೇಳಿದೆ.
ಈ ಪೈಕಿ ಪತ್ತನಂತಿಟ್ಟ ಅತ್ಯಂತ ಕಡಿಮೆ ಬೆಳವಣಿಗೆ ದರವನ್ನು ಹೊಂದಿದ್ದು, ಇಲ್ಲಿ ಶೇ.3 ಗುರುತಿಸಲಾಗಿದೆ. ದಕ್ಷಿಣದ ಆರು ಜಿಲ್ಲೆಗಳಾದ ಇಡುಕ್ಕಿ, ಕೊಟ್ಟಾಯಂ, ಆಲಪ್ಪುಳ, ಕೊಲ್ಲಂ, ಪತ್ತನಂತಿಟ್ಟ, ತಿರುವನಂತಪುರಂನಲ್ಲಿ ಜನಸಂಖ್ಯೆ ರಾಜ್ಯದ ಸರಾಸರಿಗಿಂತ ಕಡಿಮೆಯಾಗಿದೆ ಎಮದು ವರದಿ ಹೇಳಿದೆ.
ಕೇರಳ ರಾಜ್ಯದ ಜನಸಂಖ್ಯೆ 2036 ರ ವೇಳೆಗೆ 3.69 ಕೋಟಿಗೆ ಏರುವ ನಿರೀಕ್ಷೆಯಿದೆ.