ಪ್ರಜ್ವಲ್ ಇಷ್ಟೆಲ್ಲ ಮಾಡುತ್ತಿದ್ದರೂ ಅಪ್ಪ, ಅಮ್ಮ ಏನ್ ಮಾಡ್ತಿದ್ದಾರೆ?: ಶಿವರಾಮೇಗೌಡ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಜ್ವಲ್ ರೇವಣ್ಣನ ಮುಂದೆ ಉಮೇಶ್ ರೆಡ್ಡಿ ಕೂಡ ಶೂನ್ಯ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.

ಪ್ರಜ್ವಲ್ ಇಷ್ಟೆಲ್ಲಾ ಮಾಡುತ್ತಿದ್ದರೂ ಅವನ ತಂದೆ ತಾಯಿ ಏನು ಮಾಡುತ್ತಿದ್ದಾರೆ? ಒಂದೆಡೆ ತಂದೆ ಮತ್ತೊಂದೆಡೆ ಮಗ ಹೀಗೆ ಮಾಡಿ ಹಿರಿಯ ಗೌಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ತಾವು ಮಾಡಿದ ಪಾಪಕ್ಕೆ ಅವರೇ ನರಳುತ್ತಿದ್ದಾರೆ ಎಂದರು.

ದೇವರಾಜೇಗೌಡ ಪೆನ್ ಡ್ರೈವ್ ಬಿಡುವ ಹೇಳಿಕೆ ಕೊಟ್ಟಿದ್ದರು. ಆವಾಗ ದೇವೇಗೌಡರು, ಕುಮಾರಸ್ವಾಮಿ ಕತ್ತೆ ಕಾಯುತ್ತಿದ್ದರಾ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಅವರಿಗೂ ವಿಡಿಯೋ ಬಿಡುಗಡೆ ಆಗಬೇಕೆಂದಿತ್ತೇನೋ? ಕುಮಾರಸ್ವಾಮಿ ಸಂತ್ರಸ್ತ ಮಹಿಳೆಯರ ಪರ ನಿಲ್ಲಬೇಕು ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!