ಬೊಜ್ಜು ಕರಗಿಸದ ಪೊಲೀಸರ ಎತ್ತಂಗಡಿ: ಒಂದು ದಿನದಲ್ಲಿ ಕರಗಿಸೋಕಾಗೋದಿಲ್ಲ ಎಂದ ಸಿಬ್ಬಂದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಪೊಲೀಸ್‌ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಕರ್ತರ್ವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬೊಜ್ಜು ಕರಗಿಸದ ಕಾರಣ ದಿಢೀರ್‌ ಎತ್ತಂಗಡಿ ಮಾಡಲಾಗಿದೆ.

ಬಾಡಿ ಮಾಸ್‌ ಇಂಡೆಕ್ಸ್‌ ಪ್ರಮಾಣ ಶೇ,29ಕ್ಕಿಂತ ಹೆಚ್ಚಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗ ಮಾಡಲಾಗಿದೆ. ಇದರಿಂದಾಗಿ ಸಿಬ್ಬಂದಿ ಹಾಗೂ ಪೊಲೀಸ್‌ ಅಧಿಕಾರಿಗೆ ಅಸಮಾಧಾನ ಉಂಟಾಗಿದೆ.

ಬಿಎಂಐ ಪ್ರಮಾಣ ತಗ್ಗಿಸುವುದು ಒಳ್ಳೆ ವಿಷಯ ನಿಜ. ಆದರೆ ಒಂದೇ ದಿನಕ್ಕೆ ಆಗುವಂಥದ್ದಲ್ಲ. ನಮ್ಮ ಲೈಫ್‌ ಸ್ಟೈಲ್‌ ಜೊತೆಗೆ ಅನುವಂಶೀಯವಾಗಿಯೂ ಸ್ಥೂಲಕಾಯ ಆಗುತ್ತದೆ. ನಿದ್ದೆ ಸರಿಯಿಲ್ಲ, ಊಟದ ಸಮಯ ಸರಿಯಿಲ್ಲ. ವೈದ್ಯರನ್ನು ನೇಮಿಸಿ ಬಿಎಂಐ ಕಡಿಮೆ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಅದನ್ನು ಬಿಟ್ಟು ಹೀಗೆ ವರ್ಗಾವಣೆ ಮಾಡಿದರೆ ಹೇಗೆ? ಮನೆ ಮಕ್ಕಳು ಸಂಸಾರ ಬಿಟ್ಟು ಹೋಗೋದು ಹೇಗೆ ಎಂದು ಸಿಬ್ಬಂದಿ ಬೇಸರಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!